ಪೈವಳಿಕೆ: ಪೈವಳಿಕೆ ಪಂಚಾಯತ್ನಲ್ಲಿ ಕಳೆದ ಐದು ವರ್ಷಗಳಿಂದ ಸಿ.ಪಿ.ಎಂ. ಹಾಗೂ ಬಿ.ಜೆ.ಪಿ. ಒಳ ಒಪ್ಪಂದ ಮೂಲಕ ನಡೆಸಿಕೊಂಡು ಬಂದ ದುರಾಡಳಿತಕ್ಕೆ ಜನತೆ ತಕ್ಕ ಉತ್ತರ ನೀಡುವ ಮೂಲಕ ಐಕ್ಯರಂಗ ಹೆಚ್ಚು ಸ್ಥಾನಗಳನ್ನು ಪಡೆಯಲು ಕಾರಣವಾಯಿತು ಎಂದು ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿ ತಿಳಿಸಿದೆ. ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಂಡಲ ಅಧ್ಯಕ್ಷ ವಸಂತ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬ್ಲೋಕ್ ಪಂ.ಮಜಿರ್ಪಳ್ಳ ಡಿವಿಶನ್ ನಿಂದ ಆಯ್ಕೆಯಾದ ಮೋಹನ ರೈ ಕಯ್ಯಾರು ಹಾಗೂ ವಿವಿಧ ವಾರ್ಡ್ ಗಳಲ್ಲಿ ಆಯ್ಕೆಯಾದ ರಾಘವೇಂದ್ರ ಭಟ್, ಶ್ರೀನಿವಾಸ, ಪ್ರಿನ್ಸಿ ಡಿ ಸೋಜರನ್ನು ಅಭಿನಂದಿಸಲಾಯಿತು. ಹನೀಫ ಮೇರ್ಕಳ, ನಾರಾಯಣ ಏದಾರ್, ಅಬ್ಬಲ್ಲ ಹಾಜಿ, ಸಚ್ಚಿದಾನಂದ ರೈ, ಪೀಟರ್, ಎಡ್ವರ್ಡ್ ವಿನ್ಸೆಂಟ್, ನೌಶಾದ್ ಪಟ್ಲ, ಗಂಗಾಧರ ನಾಯಕ್, ಚನಿಯಪ್ಪ ಮಾಸ್ತರ್, ಜೀವನ್ ಕ್ರಾಸ್ತ, ಕಿರಣ್ ಮಚಾದೊ, ಕಮಲಹಾಸನ್, ಸಂತೋಷ ಮೊಂತೇರೊ, ಅಲಿ ಚೇವಾರ್ ಉಪಸ್ಥಿತರಿದ್ದರು. ಶಾಜಿ ಎನ್.ಸಿ. ಸ್ವಾಗತಿಸಿದರು. ಶಿವರಾಮ ಶೆಟ್ಟಿ ವಂದಿಸಿದರು.







