ಕಾಸರಗೋಡು: ಎಂ.ಜಿ.ರಸ್ತೆಯ ತೀವ್ರವಾದ ಸಾರಿಗೆ ಸಮಸ್ಯೆಗಳಿಗೆ ತುರ್ತು ಪರಿಹಾರ ಕಾಣಬೇಕೆಂದು, ನಗರದ ಸಂಪೂರ್ಣ ರಸ್ತೆಗಳ ಅಭಿವೃದ್ಧಿಗಾಗಿ ಸಮಗ್ರವಾದ ಮಾಸ್ಟರ್ ಪ್ಲಾನ್ ಸಿದ್ಧಗೊಳಿಸಿ ಜ್ಯಾರಿಗೊಳಿಸ ಬೇಕೆಂದು ಆಗ್ರಹಿಸಿ ಕಾಸರಗೋಡು ಮರ್ಚೆಂಟ್ಸ್ ಅಸೋಸಿಯೇಶನ್ ಪ್ರತಿನಿಧಿಗಳು ಪಿಡಬ್ಲ್ಯೂಡಿ ಚೀಫ್ ಇಂಜಿನಿಯರ್ ರನ್ನು ನೇರವಾಗಿ ಭೇಟಿಯಾಗಿ ಮಾತುಕತೆ ನಡೆಸಿದರು. ಸಾರಿಗೆ ಸಂಚಾರ ಸಮಸ್ಯೆ, ಅಪಘಾತ ಸಾಧ್ಯತೆಗಳು ತೀವ್ರವಾಗಿ ಎದುರಿಸುತ್ತಿರುವ ನಗರದ ವಿವಿಧ ರಸ್ತೆಗಳು, ಜಂಕ್ಷನ್ಗಳನ್ನು ಮರ್ಚಂಟ್ಸ್ ಅಸೋಸಿಯೇಶನ್ ಪ್ರತಿ ನಿಧಿಗಳ ಜೊತೆ ಪಿಡಬ್ಲ್ಯೂಡಿ ಅಧಿP ರಿಗಳು ಸಂದರ್ಶಿಸಿದರು. ಸಮಸ್ಯೆ ಉಂಟಾಗಿರುವ ವಲಯಗಳನ್ನು ಸಮಗ್ರ ವಾಗಿ ಪರಿಶೀಲಿಸಿ ವೈಜ್ಞಾನಿಕವಾದ ಪರಿಹಾರ ನಿರ್ದೇಶಗಳು ಅಡಕವಾದ ಸಮಗ್ರ ಪ್ಲಾನ್ ಸಿದ್ಧಪಡಿಸಿ ಸರಕಾರಕ್ಕೆ ಸಮರ್ಪಿಸಬೇಕೆಂದು ಅಸೋಸಿ ಯೇಶನ್ ಆಗ್ರಹಿಸಿದೆ. ಇತ್ತೀಚೆಗೆ ಎಂ.ಜಿ. ರಸ್ತೆಯಲ್ಲಿ ಓರ್ವ ವ್ಯಾಪಾರಿಯ ಸಾವಿಗೆ ಕಾರಣವಾದ ಘಟನೆಯಲ್ಲಿ ಕಾಸರಗೋಡು ಮರ್ಚೆಂಟ್ಸ್ ಅಸೋಸಿ ಯೇಶನ್ ತೀವ್ರ ಪ್ರತಿಭಟನೆ ಹಾಗೂ ದುಃಖವನ್ನು ಪಿಡಬ್ಲ್ಯೂಡಿ ಅಧಿಕಾರಿ ಗಳಿಗೆ ತಿಳಿಸಿದೆ. ನಗರದ ರಸ್ತೆ ಅಭಿವೃದ್ಧಿ, ಸಾರಿಗೆ ಪರಿಹಾರ ಕ್ರಮಗಳು ಇನ್ನೂ ವಿಳಂಬಗೊಳಿಸಬಾರದೆಂದು ಮುಂದಿನ ಕ್ರಮಗಳನ್ನು ತುರ್ತಾಗಿ ನಡೆಸಬೇಕೆಂದು ಆಗ್ರಹಿಸಲಾಯಿತು. ರಸ್ತೆ ಅಭಿವೃದ್ಧಿ ಸಂಬಂಧಪಟ್ಟ ಕ್ರಮಗಳಿಗೆ ತುರ್ತು ಪರಿಹಾರ ಉಂಟಾಗದಿದ್ದರೆ ವ್ಯಾಪಾರಿಗಳು ಹಾಗೂ ಸಾರ್ವಜನಿಕರನ್ನು ಒಗ್ಗೂಡಿಸಿ ತೀವ್ರ ಆಂದೋಲನಕ್ಕೆ ಕಾಸರಗೋಡು ಮರ್ಚೆಂಟ್ಸ್ ಅಸೋಸಿಯೇಶನ್ ನೇತೃತ್ವ ನೀಡುವುದಾಗಿ ಎಚ್ಚರಿಸಲಾಗಿದೆ.






