ಮಸೀದಿಗೆ ಹೋದ ಉಸ್ತಾದ್ ನಾಪತ್ತೆ: ಸ್ಕೂಟರ್ ರೈಲು ನಿಲ್ದಾಣ ಪರಿಸರದಲ್ಲಿ ಪತ್ತೆ

ಕುಂಬಳೆ: ಉಸ್ತಾದ್ ನಾಪತ್ತೆಯಾದ ಬಗ್ಗೆ ಕುಂಬಳೆ ಪೊಲೀಸರಿಗೆ ದೂರು ನೀಡಲಾಗಿದೆ. ಕುಂಬಳೆಗೆ ಸಮೀಪದ ಬಂಬ್ರಾಣ ತುಂಬಿಯೋಡು ಹೌಸ್‌ನ ಅಬ್ದುಲ್ ರಶೀದ್ ಎಂಬವರ ಪುತ್ರ ಉಸ್ತಾದ್ ಮುಹಮ್ಮದ್ ಶಫೀಕ್ (32) ನಾಪತ್ತೆಯಾಗಿರುವುದಾಗಿ ಅವರ ಪತ್ನಿ ನಜ್ಮುನ್ನೀಸಾ ದೂರು ನೀಡಿದ್ದು, ಅದರಂತೆ ಕುಂಬಳೆ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಡಿಸೆಂಬರ್ 21ರಂದು ರಾತ್ರಿ 8 ಗಂಟೆಗೆ ಬಂಬ್ರಾಣದ ಮಸೀದಿಗೆಂದು ಹೋದ ಪತಿ ಬಳಿಕ ಮನೆಗೆ ಹಿಂತಿರುಗಿರಲಿಲ್ಲವೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ನಜ್ಮುನ್ನೀಸಾ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ನಾಪತ್ತೆ ಯಾದ ಮುಹಮ್ಮದ್ ಶಫೀಕ್‌ರ ಸ್ಕೂಟಿಯನ್ನು ಕುಂಬಳೆ ರೈಲು ನಿಲ್ದಾಣ ಪರಿಸರದಲ್ಲಿ ಪೊಲೀಸರು ಪತ್ತೆಹಚ್ಚಿದ್ದು, ಅದನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

RELATED NEWS

You cannot copy contents of this page