ಮಣ್ಣಂಗುಳಿ ಅಂಗನವಾಡಿಯಿಂದ ಮಿಕ್ಸಿ, ಕುಕ್ಕರ್ ಸಹಿತ ಪಾತ್ರೆ ಸಾಮಗ್ರಿ ಕಳವು

ಉಪ್ಪಳ: ಉಪ್ಪಳ ಮಣ್ಣಂಗುಳಿ ಮೈದಾನ ಸಮೀಪದ ಅಂಗನವಾಡಿಗೆ ನುಗ್ಗಿದ ಕಳ್ಳ ಹಲವಾರು ಸಾಮಗ್ರಿಗಳನ್ನು ಕಳವುಗೈದ ಘಟನೆ ನಡೆದಿದೆ. ನಿನ್ನೆ ಬೆಳಿಗ್ಗೆ ಕಳವು ನಡೆದ ಬಗ್ಗೆ ಗಮನಕ್ಕೆ ಬಂದಿದ್ದು ಈ ಬಗ್ಗೆ ಅಂಗನವಾಡಿ ಶಿಕ್ಷಕಿ ಭಾಗೀರಥಿ ದೂರು ನೀಡಿದ್ದಾರೆ. ಇಲ್ಲಿಂದ ಮಿಕ್ಸಿ, ಮೂರು ಜಾರು, ಎರಡು ಕುಕ್ಕರ್, ಒಂದು ಸೌಂಡ್ ಬಾಕ್ಸ್ ಹಾಗೂ ಇತರ ಪಾತ್ರೆ ಸಾಮಗ್ರಿಗಳನ್ನು ಕಳವುಗೈಯ್ಯಲಾಗಿದೆ.

ಮೊನ್ನೆ ಸಂಜೆ 3.30 ರ ವೇಳೆ ಸಹಾಯಕಿ ರಮಣಿ ಅಂಗನವಾಡಿ ಮುಚ್ಚಿ ತೆರಳಿದ್ದರು. ನಿನ್ನೆ ಬೆಳಿಗ್ಗೆ ತಲುಪುವಾಗ ಅಂಗನವಾಡಿಯ ಕಬ್ಬಿಣದ ಗೇಟ್‌ನ ಬೀಗ ಮುರಿದ ಸ್ಥಿತಿಯಲ್ಲಿ ಕಂಡು ಬಂದಿದ್ದು, ಒಳಗೆ ನೋಡಿದಾಗ ಕಳವು ಗೈದ ಬಗ್ಗೆ ತಿಳಿದು ಬಂದಿದೆ. ಅಂಗನವಾಡಿಗೆ ಸಂಬಂಧಪಟ್ಟ ಅಧಿಕಾರಿಗಳು ತಲುಪಿ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದು, ಅಲ್ಲಿಂದ ಶ್ವಾನದಳ, ಬೆರಳಚ್ಚು ತಜ್ಞರು ತಲುಪಿ ತಪಾಸಣೆ ನಡೆಸಿದ್ದಾರೆ. ಸ್ಥಳಕ್ಕೆ ವಾರ್ಡ್ ಪ್ರತಿನಿಧಿ ಸಹಿತ ಹಲವರು ತಲುಪಿದ್ದಾರೆ. ಪರಿಸರದ ಸಿಸಿಟಿವಿಗಳಲ್ಲಿ ಕಳವು ದೃಶ್ಯ ಸೆರೆಯಾಗಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.

RELATED NEWS

You cannot copy contents of this page