ಕುಂಬಳೆ: ವಂದೇ ಮಾತರಂನಂತಹ ರಾಷ್ಟ್ರೀಯ ಭಾವೈಕ್ಯತಾ ಗೀತೆಯನ್ನು, ಅದನ್ನು ಆಲಾಪಿಸುವುದಕ್ಕೆ ನಿಷೇಧ ಏರ್ಪಡಿಸಿದ ರಾಜ್ಯದ ಮುಖ್ಯಮಂತ್ರಿ ವಿ.ಡಿ. ಸತೀಶನ್‌ರ ಆಡಳಿತ ಭಾರತದ ವಿಭಜನೆ ಕಾಲದಲ್ಲಿನ ಬ್ರಿಟೀಷ್ ಆಡಳಿತವನ್ನು ನೆನಪಿಸುವಂತಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಕೆ. ಕೃಷ್ಣದಾಸ್ ನುಡಿದರು. ರಾಷ್ಟ್ರ ಸ್ವಾಭಿಮಾನ್ ಸಮಿತಿಯ ಆಶ್ರಯದಲ್ಲಿ ಕುಂಬಳೆ ಪೇಟೆಯಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ತಿರಂಗ ಯಾತ್ರ ಉದ್ಘಾಟಿಸಿ ಅವರು ಮಾತನಾಡಿದರು. ಜವಹಾರ್‌ಲಾಲ್ ನೆಹರು, ಪಿ.ಸಿ. ಜೋಶಿ, ಮುಹಮ್ಮದಲಿ ಜಿನ್ನಾ ಭಾರತದ ವಿಭಜನೆಗೆ ನೇತೃತ್ವ ನೀಡಿದವರಾಗಿದ್ದಾರೆ.
೮೦ ವರ್ಷಗಳ ಬಳಿಕ ಭಾರತವನ್ನು ವಿಭಜಿಸಲು ಕಾಂಗ್ರೆಸ್ ಪಕ್ಷ, ಕಮ್ಯೂ ನಿಸ್ಟ್ ಪಕ್ಷ ಮತೀಯ ಕೋಮುಶಕ್ತಿ ಗಳೊಂದಿಗೆ ಕೈ ಜೋಡಿಸುತ್ತಿದೆ. ವಿದ್ಯಾರ್ಥಿ ಮುಷ್ಕರದ ಮರೆಯಲ್ಲಿ ಕೇಂದ್ರ ಸರಕಾರವನ್ನು ಬುಡಮೇಲುಗೊಳಿ ಸಲು ರಾಹುಲ್ ಗಾಂಧಿ ಹಾಗೂ ಇನ್‌ಡಿ ಒಕ್ಕೂಟ ಯತ್ನಿಸಿರುವುದಾಗಿ ಯೂ, ಭಾರತವನ್ನು ಯಾವುದಾದರೂ ರೀತಿಯಲ್ಲಿ ವಿಭಜಿಸಲಿರುವ ಯತ್ನವನ್ನು ದೇಶಪ್ರೇಮಿಗಳು ಹೋರಾಡಿ ಸೋಲಿಸುವರು ಎಂದು ಅವರು ನುಡಿದರು. ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ಅಧ್ಯಕ್ಷತೆ ವಹಿಸಿದರು. ರಾಜ್ಯ ಸಮಿತಿ ಸದಸ್ಯರಾದ ವಿ. ರವೀಂದ್ರನ್, ಸತೀಶ್ಚಂದ್ರ ಭಂಡಾರಿ, ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ, ರಾಮಪ್ಪ ಮಂಜೇಶ್ವರ, ಪ್ರಮೀಳಾ ಸಿ. ನಾಯ್ಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ.ಆರ್. ಸುನಿಲ್, ಎನ್. ಬಾಬುರಾಜ್, ಉಪಾಧ್ಯಕ್ಷರಾದ ಪಿ. ರಮೇಶ್, ಮುರಳೀಧರ ಯಾದವ್, ಕುಂಬಳೆ ಮಂಡಲ ಸಮಿತಿ ಅಧ್ಯಕ್ಷ ವಿಕ್ರಮ್ ಪೈ, ಮಧೂರು ಪಂ. ಅಧ್ಯಕ್ಷೆ ಸುಜ್ಞಾನಿ ಶ್ಯಾನುಭೋಗ್, ಕಾರಡ್ಕ ಪಂ. ಅಧ್ಯಕ್ಷೆ ಎಂ.ಜನನಿ ಮಾತನಾಡಿದರು.
ಹೋಲಿಫ್ಯಾಮಿಲಿ ಶಾಲೆಯ ಪರಿ ಸರದಿಂದ ಆರಂಭಿಸಿದ ತಿರಂಗ ಯಾತ್ರ ದಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದು ನೂರಾರು ಮಂದಿ ಭಾಗವಹಿಸಿದರು.






