ಪಾತ್ರೆ ತೊಳೆಯುತ್ತಿದ್ದ ಮಧ್ಯೆ ನದಿಗೆ ಬಿದ್ದು ಮಹಿಳೆ ನಾಪತ್ತೆ

ಕಾಸರಗೋಡು: ಪಾತ್ರೆ ತೊಳೆಯುವುದರ ಮಧ್ಯೆ ಯುವತಿ ಹೊಳೆಗೆ ಬಿದ್ದು ನಾಪತ್ತೆಯಾದ ಘಟನೆ ನಡೆದಿದೆ. ಕಣಿಚ್ಚಿರ ನಿವಾಸಿ ಆಟೋಚಾಲಕ ಅಜಿತ್‌ರ ಪತ್ನಿ ನದಿಯ (48) ನಾಪತ್ತೆಯಾದವರು. ಇಂದು ಬೆಳಿಗ್ಗೆ 7 ಗಂಟೆ ವೇಳೆ ಮನೆ ಸಮೀಪದ ಹೊಳೆ ಬದಿಯಲ್ಲಿ ಘಟನೆ ನಡೆದಿದೆ. ಮಹಿಳೆಯ ಮೊಬೈಲ್ ಫೋನ್ ದಡದಲ್ಲಿ ಪತ್ತೆಯಾಗಿದೆ. ಅಗ್ನಿಶಾಮಕ ದಳದ ಸ್ಕೂಬಾ ತಂಡ ಹಾಗೂ ನೀಲೇಶ್ವರ ಪೊಲೀಸರು, ಸ್ಥಳೀಯರು ಹುಡುಕಾಟ ನಡೆಸುತ್ತಿದ್ದಾರೆ. ನೀಲೇಶ್ವರ ನಗರಸಭೆಯ ಅಧ್ಯಕ್ಷ ಪಿ.ಪಿ. ಮೊಹಮ್ಮದ್ ರಾಫಿ, ಕೌನ್ಸಿಲರ್‌ಗಳಾದ ಕೆ. ಸತೀಶನ್, ಇ. ಶಜೀರ್ ಸ್ಥಳಕ್ಕೆ ತಲುಪಿದ್ದಾರೆ.

RELATED NEWS

You cannot copy contents of this page