ಮಹಿಳೆ ಕಣ್ಣಿಗೆ ಮೆಣಸಿನ ಪುಡಿ ಎರಚಿ ಚಿನ್ನಾಭರಣ ದರೋಡೆ

ಮಲಪ್ಪುರಂ: ಮನೆಯಲ್ಲಿ ಏಕಾಂಗಿಯಾಗಿ ವಾಸಿಸುವ ಮಹಿ ಳೆಯ ಕಣ್ಣಿಗೆ ಮೆಣಸಿನ ಹುಡಿ ಎರಚಿದ ತಂಡ ಎರಡು ಪವನ್ ಚಿನ್ನಾಭರಣ ಕಸಿದು ಪರಾರಿಯಾದ ಘಟನೆ ನಡೆದಿದೆ. ಮಲಪ್ಪುರಂ ಜಿಲ್ಲೆಯ ಅಂಬಲಪಡಿ ಬೈಪಾಸ್‌ನ ಲ್ಲಿರುವ ನಿವೃತ್ತ ಯೋಧ ದಿ|  ಪಾಲಿಕ ತ್ತೊಟ್ಟಿಲ್ ವಿಜಯ ಕುಮಾರ್ ಎಂಬವರ ಪತ್ನಿ ಕೆ. ಚಂದ್ರಮತಿ (63) ಎಂಬವರ ಮನೆಗೆ ಮೂವರ ತಂಡ ತಲುಪಿ ಈ ಕೃತ್ಯವೆಸಗಿದೆ. ಮೊನ್ನೆ ರಾತ್ರಿ 9 ಗಂಟೆ ವೇಳೆ ಮನೆಯ ಹೊರಗೆ ಶಬ್ದ ಕೇಳಿಬಂದಿದ್ದು, ಇದರಿಂದ ಚಂದ್ರಮತಿ ಬಾಗಿಲು ತೆರೆದು ನೋಡುತ್ತಿದ್ದಂತೆ ತಂಡ ಅವರ ಕಣ್ಣಿಗೆ ಮೆಣಸಿನ ಪುಡಿ ಎರಚಿ ಕುತ್ತಿಗೆಯಲ್ಲಿದ್ದ ಚಿನ್ನಾಭರಣ ವನ್ನು ಎಳೆದು ಪರಾರಿಯಾಗಿ ರುವುದಾಗಿ ದೂರಲಾಗಿದೆ.

You cannot copy contents of this page