ಉಪ್ಪಳ: ಮನೆಯೊಳಗೆ ಬಿದ್ದು ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಯುವತಿ ಮೃತಪಟ್ಟರು. ಬಾಯಾರು ಸಜಂಕಿಲ ಕೋಡಿಯಡ್ಕ ನಿವಾಸಿ ಅನಂತ ಪದ್ಮನಾಭ ಎಂಬವರ ಪತ್ನಿ ಗಂಗ (37) ಮೃತಪಟ್ಟ ಯುವತಿ. ಈ ತಿಂಗಳ 8ರಂದು ಮುಂಜಾನೆ ಇವರು ಮನೆಯೊಳಗೆ ಬಿದ್ದು ಗಂಭೀರ ಗಾಯಗೊಂಡಿದ್ದರೆ ನ್ನಲಾಗಿದೆ. ಇದರಿಂದ ಇವರನ್ನು ದೇರಳಕಟ್ಟೆಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ನಿಧನ ಸಂಭವಿಸಿದೆ.
ಮೃತರು ಪತಿ, ಪುತ್ರಿ ಧಾತ್ರಿ, ತಾಯಿ ಸಹಿತ ಅಪಾರ ಬಂಧು-ಮಿತ್ರರರನ್ನು ಅಗಲಿದ್ದಾರೆ.



