ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಪಾರಕಟ್ಟೆ ಐಲ ಬೀಚ್ ರಸ್ತೆಯನ್ನು ಅಭಿವೃದ್ಧಿಗೊಳಿಸಲು ಪಂಚಾಯತ್ ವತಿಯಿಂದ ಕಾಮಗಾರಿ ಅರಂಭಿಸಿದ್ದರೂ, ಆಮೆ ನಡಿಗೆ ಯಲ್ಲಿ ಸಾಗುತ್ತಿರುವುದು ಸಾರ್ವ ಜನಿಕರ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿರುವುದಾಗಿ ದೂರಲಾಗಿದೆ. ಈ ರಸ್ತೆಯ ಅಭಿವೃದ್ದಿ ಹಿನ್ನೆಲೆಯಲ್ಲಿ ರಸ್ತೆ ಬದಿ ಚರಂಡಿ ನಿರ್ಮಾಣ ಹಾಗೂ ರಸ್ತೆಗೆ ಕಾಂಕ್ರೀಟ್ ಹಾಕುವ ಯೋಜನೆಯನ್ನು ಕೈಗೊಂಡಿದ್ದಾರೆ. ಕಳೆದ ಎರಡು ತಿಂಗಳ ಹಿಂದೆಯೇ ಕಾಮಗಾರಿ ಆರಂಬಿsಸಿದ್ದರು. ಆರಂಭದಲ್ಲಿ ಚರಂಡಿ ನಿರ್ಮಾಣಗೊಳಿಸಿದ ಬಳಿಕ ರಸ್ತೆಗೆ ಕಾಂಕ್ರಿಟ್ ಹಾಕುವ ಮೊದಲು ರಸ್ತೆ ಉದ್ದಕ್ಕೂ ಜಲ್ಲಿ ಕಲ್ಲು ಹಾಗೂ ಜಲ್ಲಿ ಹುಡಿಯನ್ನು ಮಿಶ್ರಿತ ಮಾಡಿ ಹಾಕಿ ಒಂದು ತಿಂಗಳು ಕಳೆದರೂ ಕಾಂಕ್ರಿಟ್ ಕೆಲಸವನ್ನು ಇನ್ನೂ ಆರಂಭಿಸದೆ ಇರುವುದ ರಿಂದ ವಾಹನ ಸಂಚಾರದ ವೇಳೆ ಸಮಸ್ಯೆಗೀಡಾಗುತ್ತಿದ್ದಾರೆ.
ಈ ಪ್ರದೇಶದಲ್ಲಿ ವಿವಿಧ ಆರಾಧಾನಾಲಯಗಳು, ನೂರಾರು ಮನೆಗಳಿದ್ದು, ಈ ರಸ್ತೆಯಲ್ಲಿ ದಿನನಿತ್ಯ ಸಂಚಾರ ಶೋಚನೀಯವಾಗಿದೆ. ಕೂಡಲೇ ಕಾಂಕ್ರಿಟ್ ಕಾಮಗಾರಿಯನ್ನು ಪೂರ್ತಿಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕೆಂದು ಊರವರು ಆಗ್ರಹಿಸಿದ್ದಾರೆ.







