ಕಾಸರಗೋಡು: ಮನೆ ಹಿತ್ತಿಲಿನಲ್ಲಿರುವ ತೆಂಗಿನ ಮರದಿಂದ ಕಾಯಿಕೊಯ್ಯುತ್ತಿದ್ದ ವೇಳೆ ಬಿದ್ದು ಕಾರ್ಮಿಕ ಮೃತಪಟ್ಟ ಘಟನೆ ನಡೆದಿದೆ. ಬಂಗಳಂ ಪಳ್ಳತ್ತುವಯಲ್ ನಿವಾಸಿ ಪಿ.ವಿ. ಕೊಟ್ಟನ್ (65) ಮೃತ ವ್ಯಕ್ತಿ. ನಿನ್ನೆ ಇವರು ಮನೆ ಹಿತ್ತಿಲಿನಲ್ಲಿರುವ ತೆಂಗಿನ ಮರದಿಂದ ಕಾಯಿ ಕೊಯ್ಯುತ್ತಿದ್ದ ವೇಳೆ ಆಯ ತಪ್ಪಿ ಕೆಳಗೆ ಬಿದ್ದು ಗಾಯಗೊಂಡಿ ದ್ದರು. ಕೂಡಲೇ ನೀಲೇಶ್ವರದ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗ ಲಿಲ್ಲ. ಮೃತರು ಪತ್ನಿ ಕಾರ್ತ್ಯಾಯಿನಿ, ಮಕ್ಕಳಾದ ನಿತಿನ್, ನಿಖಿಲ, ನಿತ್ಯ, ಅಳಿಯಂದಿರಾದ ಸಂತೋಷ್, ಪ್ರಶಾಂತ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






