ಮಲತ್ಯಾಜ್ಯ ತಂದು ಹೊಳೆಗೆ: ಪೊಸೋಟು ಹೊಳೆಯ ನೀರು ಮಲಿನ; ಆರೋಗ್ಯ ಸಮಸ್ಯೆ ಭೀತಿ

ಮಂಜೇಶ್ವರ: ಪೊಸೋಟು ಹೊಳೆ ಕಸದ ತೊಟ್ಟಿಯಾಗಿ ಮಾರ್ಪಡುತ್ತಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ತೀವ್ರ ಆತಂಕ ಮೂಡಿಸಿದೆ. ಜನಸಂದಣಿ ಇಲ್ಲದ ಸಮಯ ನೋಡಿ ಸೆಪ್ಟಿಕ್ ಟ್ಯಾಂಕ್‌ಗಳಿAದ ಸಂಗ್ರಹಿಸಿದ ತ್ಯಾಜ್ಯವನ್ನು ಟ್ಯಾಂಕರ್‌ಗಳ ಮೂಲಕ ತಂದು ನೇರವಾಗಿ ಹೊಳೆಗೆ ಸುರಿಯಲಾಗುತ್ತಿದೆ ಎಂಬ ಗಂಭೀರ ದೂರುಗಳು ಕೇಳಿಬಂದಿವೆ.
ಕೇವಲ ಮಲತ್ಯಾಜ್ಯ ಮಾತ್ರವಲ್ಲದೆ, ಕೋಳಿ ಮತ್ತು ದನದ ಮಾಂಸ ತ್ಯಾಜ್ಯಗಳನ್ನು ಕೂಡ ಇಲ್ಲಿ ಎಸೆಯಲಾಗುತ್ತಿದೆ. ಇದರಿಂದಾಗಿ ಇಡೀ ಪರಿಸರ ದುರ್ನಾತದಿಂದ ಕೂಡಿದ್ದು, ಈ ಭಾಗದ ಸುಮಾರು 60ಕ್ಕೂ ಹೆಚ್ಚು ಕುಟುಂಬಗಳು ಸಾಂಕ್ರಾಮಿಕ ರೋಗ ಭೀತಿಯನ್ನು ಎದುರಿಸುತ್ತಿದ್ದಾರೆ. ಹೊಳೆಯ ನೀರು ಸಂಪೂರ್ಣ ಕಲುಷಿತಗೊಂಡಿದ್ದು, ಮಲಿನ ನೀರು ಸುತ್ತಮುತ್ತಲಿನ ಮನೆಗಳ ಬಾವಿ ನೀರಿಗೂ ಸೇರುತ್ತಿದೆ. ಇದರಿಂದ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ನೀರಿನ ವಿಷಕಾರಿ ಅಂಶದಿAದಾಗಿ ಹೊಳೆಯಲ್ಲಿರುವ ಮೀನುಗಳು ಮತ್ತು ಇತರ ಜಲಚರಗಳು ಸತ್ತು ತೇಲುತ್ತಿರುವುದು ಪರಿಸರದ ಭೀಕರತೆಗೆ ಸಾಕ್ಷಿಯಾಗಿದೆ. ಸ್ಥಳೀಯ ನಿವಾಸಿಗಳ ಆರೋಪದಂತೆ, ಕೇವಲ ಸ್ಥಳೀಯವಲ್ಲದೆ ನೆರೆಯ ಕರ್ನಾಟಕ ಭಾಗದಿಂದಲೂ ಟ್ಯಾಂಕರ್‌ಗಳಲ್ಲಿ ಮಲತ್ಯಾಜ್ಯವನ್ನು ತಂದು ಇಲ್ಲಿನ ಹೊಳೆಗೆ ಸುರಿಯಲಾಗುತ್ತಿದೆ. ಸಂಬAಧಪಟ್ಟ ಅಧಿಕಾರಿಗಳು ತ್ಯಾಜ್ಯ ಸುರಿಯುತ್ತಿರುವ ಕಿಡಿಗೇಡಿಗಳ ವಿರುದ್ದ ಕ್ರಮಕೈಗೊಳ್ಳಲು ಸ್ಥಳೀಯರು ಒತ್ತಾಯಿಸಿದ್ದಾರೆ.

You cannot copy contents of this page