ಮಗಳ ಮದುವೆ ಕಳೆದು ಮೂರನೇ ದಿನ ತಂದೆ ಹೃದಯಾಘಾತದಿಂದ ನಿಧನ

ಪೆರ್ಲ: ಮಗಳ ಮದುವೆ ಕಳೆದು ಮೂರನೇ ದಿನ ತಂದೆ ಹೃದಯಾಘಾತ ದಿಂದ ನಿಧನಹೊಂದಿದ ಘಟನೆ ನಡೆದಿದೆ.

ಮೂಲತಃ ಮಣಿಯಂಪಾರೆ ಸರ್ವೆ ನಿವಾಸಿಯೂ ಪ್ರಸ್ತುತ ಉಕ್ಕಿನಡ್ಕ ಮಸೀದಿ ಬಳಿ ವಾಸಿಸುವಸಾದಿಕ್ ಸರ್ವೆ (55) ಎಂಬವರು ಮೃತಪಟ್ಟ ವ್ಯಕ್ತಿ.  ನಿನ್ನೆ ರಾತ್ರಿ ಊಟಮಾಡಿ ಮನೆಯವ ರೊಂದಿಗೆ ಮಾತನಾಡುತ್ತಾ ಕುಳಿತಿದ್ದಾಗ ಸಾದಿಕ್‌ರಿಗೆ ಎದೆನೋವು  ಅನುಭವ ಗೊಂಡಿತ್ತೆನ್ನಲಾಗಿದೆ.  ಕೂಡಲೇ ಅವರನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.  ಈ ತಿಂಗಳ ೩ರಂದು ಪುತ್ರಿ ಡಾ| ಸರ್ಫುನ್ನಿಸಾರ ಮದುವೆ ನಡೆದಿತ್ತು. ಇದರ ಬೆನ್ನಲ್ಲೇ ತಂದೆ ನಿಧನಹೊಂದಿರುವುದು ಕುಟುಂಬಕ್ಕೆ ತೀವ್ರ ಶೋಕವುಂಟುಮಾಡಿದೆ. ಈ ಹಿಂದೆ ಗಲ್ಫ್‌ನಲ್ಲಿದ್ದ ಸಾದಿಕ್ ಪ್ರಸ್ತುತ ಊರಿನಲ್ಲಿ ಕೃಷಿಕನಾಗಿದ್ದರು. ಅಲ್ಲದೆ  ಕ್ಷೇಮ ಚಟುವಟಿಕೆಗಳಲ್ಲೂ ನಿರತರಾಗಿದ್ದರು.

ಮೃತರು ಪತ್ನಿ ಸಫಿಯ, ಮಕ್ಕಳಾದ ಡಾ| ಸರ್ಪುನ್ನಿಸ, ಸಾಜಿದ, ಸಿಬಿಲಿಯಾತ್, ಮುಸ್ತಫ, ಅಳಿಯ ಡಾ| ನಬ್‌ಹಾನ್ (ಪನ್ನಿಪ್ಪಾರೆ), ಸಹೋದರ-ಸಹೋದರಿಯರಾದ ಮೊಹಮ್ಮದ್ ಹಾಜಿ (ಬಾಪಾಲಿಪೊನ ಮಹಲ್‌ನ ಅಧ್ಯಕ್ಷ), ಅಬ್ದುಲ್ಲ ಹಾಜಿ, ಅಬ್ದುಲ್ ರಹ್ಮಾನ್, ಕುಂಞಿಮಹಮ್ಮದ್ ಹಾಜಿ, ಹಸೈನಾರ್, ಬೀಫಾತಿಮ, ರಾಬಿಯಾ, ಅಶ್ರಫ್, ಅಬ್ದುಲ್ ಅಸೀಸ್, ಅಬ್ದುಲ್ ಹಮೀದ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page