ಕೊಚ್ಚಿ: ರೈಲಿನ ಶೌಚಾಲಯ ದೊಳಗೆ ಹೋದ ಯುವಕ ಹಾಗೂ ಯುವತಿ ಎರಡು ಗಂಟೆಗಳ ಕಾಲ ಬಾಗಿಲು ಮುಚ್ಚಿ ಒಳಗಿದ್ದುದಾಗಿ ದೂರಲಾಗಿದೆ. ಇದರಿಂದ ಇತರ ಪ್ರಯಾಣಿಕರಿಗೆ ಶೌಚಾಲಯವನ್ನು ಬಳಸಲು ಸಾಧ್ಯವಾಗದೇ ಇದ್ದುದರಿಂದ ಬಾಗಿಲು ಬಡಿದು ಬೊಬ್ಬೆ ಹಾಕಿದರೂ ಯುವಕ-ಯುವತಿ ಹೊರಗೆಬಂದಿಲ್ಲ. ಕೊನೆಗೆ ರೈಲ್ವೇ ಅಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ ಶೌಚಾಲಯದ ಬಾಗಿಲು ತೆರೆದಿದ್ದು ಆದರೆ ಏನೂ ಸಂಭವಿಸಿಲ್ಲವೆಂಬ ರೀತಿಯಲ್ಲಿ ಯುವಕ-ಯುವತಿ ವರ್ತಿಸಿರುವುದಾಗಿ ದೂರಲಾಗಿದೆ.
ಇದೇ ವೇಳೆ ಯುವಕ ಹಾಗೂ ಯುವತಿ ಶೌಚಾಲಯದೊಳಗೆ ಅವಿತುಕೊಂಡು ಇತರ ಪ್ರಯಾಣಿಕರು ಬಾಗಿಲು ಬಡಿಯುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದರೊಂದಿಗೆ ರೈಲ್ವೇಯ ವ್ಯವಸ್ಥೆ ಹಾಗೂ ಪ್ರಯಾಣಿಕರ ಸುರಕ್ಷತೆಯ ಕುರಿತು ಹಲವು ಪ್ರಶ್ನೆಗಳನ್ನು ಜನರು ಮುಂದಿರಿಸಿದ್ದಾರೆ. ವೀಡಿಯೋ ವೈರಲ್ ಆಯಿತೆಂದು ರೈಲಿನ ಇತರ ಪ್ರಯಾಣಿಕರು ತಿಳಿಸಿದಾಗ ಅದರಿಂದ ತನಗೇನಾಯಿತು? ತನಗೆ ಇಷ್ಟವುಳ್ಳದ್ದನ್ನು ತಾನು ಮಾಡುವೆ ಎಂದು ಯುವತಿ ಹೇಳುವುದು ಕೂಡಾ ವೀಡಿಯೋದಲ್ಲಿದೆ. ವೀಡಿಯೋ ವೀಕ್ಷಿಸಿದ ವ್ಯಕ್ತಿಗಳು ಯುವಕ ಹಾಗೂ ಯುವತಿಯ ವರ್ತನೆಯನ್ನು ಪ್ರಶ್ನಿಸಿದ್ದು ಇದು ಪ್ರಯಾಣಿಕರ ಹಕ್ಕುಗಳ ಉಲ್ಲಂಘನೆಯಾಗಿದೆ ಯೆಂದೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆ ಮುಂದಿರಿಸಿದ್ದಾರೆ.







