ಮಣಿಯಂಪಾರೆಯ ಯುವಕ ಒಮಾನ್‌ನಲ್ಲಿ ಸರೋವರಕ್ಕೆ ಬಿದ್ದು ಮೃತ್ಯು

ಪೆರ್ಲ: ಮಣಿಯಂಪಾರೆ ನಿವಾಸಿ ಯುವಕನೋರ್ವ ಒಮಾನ್‌ನಲ್ಲಿ ಸರೋವರಕ್ಕೆ ಬಿದ್ದು ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಮಣಿಯಂ ಪಾರೆಯ  ಶಾಹುಲ್ ಹಮೀದ್ ಎಂಬವರ ಪುತ್ರ ಆಶಿಕ್ (21) ಮೃತಪಟ್ಟ  ದುರ್ದೈವಿ.  ಒಮಾನ್‌ನ ವಾದಿಶಾಬಿ ಎಂಬಲ್ಲಿರುವ ಸರೋ ವರದಲ್ಲಿ ನಿನ್ನೆ ಮಧ್ಯಾಹ್ನ  ಸ್ನೇಹಿತ ರೊಂದಿಗೆ ಆಶಿಕ್ ಸ್ನಾನಕ್ಕಿಳಿದಿ ದ್ದರೆನ್ನಲಾಗಿದೆ.   ಮೇಲಿನಿಂದ ಸರೋವರಕ್ಕೆ ಹಾರಿದಾಗ ತಲೆ ಕಲ್ಲಿಗೆ ಬಡಿದು ಇವರು ಗಂಭೀರ ಗಾಯ ಗೊಂಡು ತಕ್ಷಣ ಮೃತಪಟ್ಟಿದ್ದಾರೆಂದು ಹೇಳಲಾಗುತ್ತಿದೆ.  ಮೃತದೇಹವನ್ನು ಊರಿಗೆ ತರಲು ಕೆಎಂಸಿಸಿ ನೇತೃತ್ವದಲ್ಲಿ ಕ್ರಮ ಆರಂಭಿಸಲಾಗಿದೆ.  ಏಳು ತಿಂಗಳ ಹಿಂದೆಯಷ್ಟೇ ಸೂಪರ್ ಮಾರ್ಕೆಟ್‌ನಲ್ಲಿ ಕೆಲಸಕ್ಕೆಂದು ಆಶಿಕ್ ಒಮಾನ್‌ಗೆ ತೆರಳಿದ್ದರು.  ಇವರ ತಾಯಿ ಸುಬೈದ ನಾಲ್ಕು ವರ್ಷಗಳ ಹಿಂದೆ ವಾಹನ ಅಪಘಾತದಲ್ಲಿ ಮೃತಪಟ್ಟಿದ್ದರು.

ಮೃತರು ತಂದೆ,  ಸಹೋದರ ರಾದ ಅನಿಕ್ಕ, ಅನ್ಶಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಆಶಿಕ್‌ರ ಅಕಾಲಿಕ ನಿಧನದಿಂದ ನಾಡಿ ನಲ್ಲಿ ಶೋಕಸಾಗರ ಸೃಷ್ಟಿಯಾಗಿದೆ.

RELATED NEWS

You cannot copy contents of this page