ವಾಹನ ಅಪಘಾತ ಗಾಯಗೊಂಡಿದ್ದ ಯುವಕ ಮೃತ್ಯು

ಕಾಸರಗೋಡು: ಖಾಸಗಿ ಬಸ್-ಸ್ಕೂಟರ್ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟನು. ಇರಿಯ ಮಂಡೆಂಗಾನದ ಫಾರೂಕ್ (32) ಮೃತಪಟ್ಟ ದುರ್ದೈವಿ. ಇವರು ಇರಿಯದಲ್ಲಿ ಕೊರಿಯರ್  ಸಂಸ್ಥೆಯ ನೌಕರಾಗಿ ದ್ದರು. ಕಳೆದ ಬುಧವಾರ ಬೆಳಿಗ್ಗೆ ಇರಿಯಾ ಮಸೀದಿ ಮುಂಭಾಗದ ರಸ್ತೆಯಲ್ಲಿ ಅಪಘಾತವುಂಟಾಗಿತ್ತು. ಕಾಞಂಗಾಡ್‌ಗೆ ಬರುತ್ತಿದ್ದ ಬಸ್‌ಗೆ ಫಾರೂಕ್ ಪ್ರಯಾಣಿಸುತ್ತಿದ್ದ ಸ್ಕೂಟರ್ ಢಿಕ್ಕಿ ಹೊಡೆದಿತ್ತು. ಇದರಿಂದ ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಫಾರೂಕ್ ನಿನ್ನೆ ರಾತ್ರಿ ಮೃತಪಟ್ಟರು

You cannot copy contents of this page