ಕಾಸರಗೋಡು: ಪಳ್ಳಿಕ್ಕೆರೆಯ ಕ್ಷೇತ್ರವೊಂದರಲ್ಲಿ ಉತ್ಸವ ವೇಳೆ ದೈವದ ಹೊಡೆತದಿಂದ ಯುವಕನೋರ್ವ ಬೀಳುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ನೀಲೇಶ್ವರ ಪಳ್ಳಿಕ್ಕೆರೆ ಪಾಲರೆಕೀಳಿಲ್ ಶ್ರೀ ವಿಷ್ಣುಮೂರ್ತಿ ಕ್ಷೇತ್ರದಲ್ಲಿ ದೈವದರ್ಶನ ವೇಳೆ ಈ ಘಟನೆ ನಡೆದಿದೆಯೆಂದು ಹೇಳಲಾಗುತ್ತಿದೆ. ಮೊನ್ನೆ ರಾತ್ರಿ ಪೂಮರುದನ್ ದೈವದ ವೆಳ್ಳಾಟ ನಡೆಯುತ್ತಿದ್ದಂತೆ ದೈವ ಹೊಡೆದಿರುವುದಾಗಿಯೂ ಈ ವೇಳೆ ಗಾಯಗೊಂಡು ವ್ಯಕ್ತಿ ನೆಲಕ್ಕೆ ಬೀಳುವ ದೃಶ್ಯ ಬಹಿರಂಗಗೊಂಡಿದೆ. ನೀಲೇಶ್ವರ ನಿವಾಸಿ ಮನು ಎಂಬವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ತಲುಪಿಸಿ ಚಿಕಿತ್ಸೆ ನೀಡಲಾಯಿತು. ಭಯಪಡಿಸುವ ಆಚಾರದ ಅಂಗವಾಗಿ ವೆಳ್ಳಾಟ ವೇಳೆ ದೈವ ವ್ಯಕ್ತಿಗಳ ಮೇಲೆ ಹಲ್ಲೆಗೈಯ್ಯುವ ಕ್ರಮವಿದೆಯೆಂದು ಹೇಳಲಾಗುತ್ತಿದೆ. ಹೀಗೆ ದೈವದಿಂದ ಹಲ್ಲೆಗೊಳ್ಳಲು ಭಕ್ತರು ಗುಂಪುಗೂಡಿ ನಿಲ್ಲುತ್ತಿದ್ದಾರೆ. ಹೀಗೆ ನಿಂತಿದ್ದಾಗ ದೈವದ ಹೊಡೆತದಿಂದ ಮನು ಗಾಯಗೊಂಡಿ ದ್ದಾರೆಂದು ತಿಳಿದುಬಂದಿದೆ. ಇದೇ ವೇಳೆ ದೃಶ್ಯ ವ್ಯಾಪಕವಾಗಿ ಹರಿದಾಡ ತೊಡಗುವುದರೊಂದಿಗೆ ದೈವ ಕಟ್ಟಿದ ವ್ಯಕ್ತಿ ವಿರುದ್ಧ ವ್ಯಾಪಕ ಟೀಕೆಗಳು ಕೇಳಿಬಂದಿದೆ.







