ಜ್ವರಕ್ಕೆ ಚಿಕಿತ್ಸೆಗೆ ತಲುಪಿದ ಯುವಕ  ಆಸ್ಪತ್ರೆಯಲ್ಲಿ ಕುಸಿದು ಬಿದ್ದು ಮೃತ್ಯು

ಕಣ್ಣೂರು: ಜ್ವರ ತಗಲಿ   ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದ ಯುವಕ ಕುಸಿದು ಬಿದ್ದು ಮೃತಪಟ್ಟರು. ಚಪ್ಪಾರಪಡವ್ ಇ.ಸಿ. ಅಬ್ದುಲ್ಲರ ಪುತ್ರ ಮರ್ಷಾದ್ (25) ನಿನ್ನೆ ಮಧ್ಯಾಹ್ನ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ತಂದೆಯ ಜೊತೆ ಚಪ್ಪಾರಪಡವ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಲುಪಿದ ಮರ್ಷಾದ್ ವೈದ್ಯರನ್ನು ಕಾಣಲೆಂದು ನಿಂತಿದ್ದ ಮಧ್ಯೆ ಕುಸಿದು ಬಿದ್ದಿದ್ದರು. ಕೂಡಲೇ ಕಣ್ಣೂರಿನ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ತಲುಪಿಸಲಾಯಿತಾದರೂ ಆ ವೇಳೆಗೆ ಮೃತಪಟ್ಟರು.  ಮೃತರು ತಂದೆ, ತಾಯಿ ಫಾತ್ವಿಮ, ಸಹೋದರ- ಸಹೋದರಿ ಯಾದ ಉಮೈರ್, ಮರ್ಜಾನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page