ಸ್ಕೂಟರ್‌ಗೆ ಕಾರು ಢಿಕ್ಕಿ ಹೊಡೆದು ಯುವಕನಿಗೆ ಗಂಭೀರ

ಕುಂಬಳೆ: ಇಲ್ಲಿನ ದೇವಿನಗರ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಯುವಕನೋರ್ವ ಗಂಭೀರ ಗಾಯಗೊಂಡಿದ್ದಾರೆ. ಮೊಗ್ರಾಲ್ ನಾಂಗಿ ಕಡಪ್ಪುರದ ರಾಸಿಕ್ (19) ಗಾಯಗೊಂಡಿದ್ದು, ಇವರನ್ನು ಚೆಂಗಳ ಇಂದಿರಾನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಸಂಜೆ 5.30ರ ವೇಳೆ ಅಪಘಾತ ವುಂಟಾಗಿದೆ.

ರಾಸಿಕ್ ಕುಂಬಳೆಯಿಂದ ಕೊಪ್ಪರ ಬಜಾರ್ ಭಾಗಕ್ಕೆ ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದರು. ಇವರು ದೇವಿನಗರಕ್ಕೆ ತಲುಪಿದಾಗ ಕಾಸರಗೋಡು ಭಾಗದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂದು ಸರ್ವೀಸ್ ರಸ್ತೆಗೆ ತಲುಪಿದ ಕಾರು ಢಿಕ್ಕಿ ಹೊಡೆದು ಅಪಘಾತ ವುಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರಿಂದ ಗಂಭೀರಗಾಯ ಗೊಂಡ ರಾಸಿಕ್‌ರನ್ನು ಕೂಡಲೇ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿ, ಬಳಿಕ ಚೆಂಗಳದ ಖಾಸಗಿ ಆಸ್ಪತ್ರೆಗೆ ಕೊಂ ಡೊಯ್ದು ದಾಖಲಿಸಲಾಗಿದೆ. ದೇವಿ ನಗರದಲ್ಲಿ ಇದೇ ರೀತಿಯಲ್ಲಿ ಈ ಹಿಂದೆಯೂ ಅಪಘಾತಗಳು ಸಂಭವಿ ಸಿದೆ ಎಂದು ನಾಗರಿಕರು ಹೇಳುತ್ತಿದ್ದಾರೆ.

You cannot copy contents of this page