ಅಶ್ಲೀಲ ದೃಶ್ಯ, ಸಂದೇಶ ಕಳುಹಿಸಿರುವುದಾಗಿ ಆರೋಪಿಸಿ ಎಸ್‌ಎಫ್‌ಐ ಜಿಲ್ಲಾ ಸೆಕ್ರೆಟರಿ ವಿರುದ್ಧ ಯುವತಿ ದೂರು: ಪಕ್ಷ ತನಿಖೆ ಆರಂಭ

ಕಾಸರಗೋಡು: ಎಸ್‌ಎಫ್‌ಐ ಕಾಸರಗೋಡು ಜಿಲ್ಲಾ ಸೆಕ್ರೆಟರಿ ತನ್ನ ಫೋನ್‌ಗೆ ನಿರಂತರ ಅಶ್ಲೀಲ ದೃಶ್ಯ, ಸಂದೇಶಗಳನ್ನು  ಕಳುಹಿಸುತ್ತಿರುವುದಾಗಿ ಆರೋಪಿಸಿ ಯುವತಿ ಸಿಪಿಎಂ ಜಿಲ್ಲಾ ಸೆಕ್ರೆಟರಿಗೆ ದೂರು ನೀಡಿದ್ದಾಳೆ.

ಎಸ್‌ಎಫ್‌ಐ  ಏರಿಯಾ ಕಮಿಟಿ ಸದಸ್ಯೆಯಾದ ಯುವತಿ ದೂರು ನೀಡಿದ್ದು ಇದರಂತೆ ಪಕ್ಷ ತನಿಖೆ ಆರಂಭಿಸಿದೆ. ಎಸ್‌ಎಫ್‌ಐ ಜಿಲ್ಲಾ ಸೆಕ್ರೆಟರಿ ಕೆ. ಅನುರಾಗ್ ಯುವತಿಯ ಫೋನ್‌ಗೆ ಹಲವು ಬಾರಿ ಅಶ್ಲೀಲ ದೃಶ್ಯಗಳು ಹಾಗೂ ಸಂದೇಶಗಳನ್ನು ಕಳುಹಿಸಿರುವುದಾಗಿ ದೂರಲಾಗಿದೆ. ಇಂತಹ ದೃಶ್ಯ, ಸಂದೇಶಗಳನ್ನು ತನಗೆ ಕಳುಹಿಸಕೂಡದು ಎಂದು ಆರಂಭ ದಲ್ಲೇ ಆತನಿಗೆ ಯುವತಿ ತಿಳಿಸಿದ್ದಾ ಳೆಂದು ಹೇಳಲಾಗುತ್ತಿದೆ. ಆದರೆ ಅನಂತರವೂ  ಈತ ದೃಶ್ಯ, ಸಂದೇಶಗಳನ್ನು ಕಳುಹಿಸಿರುವುದರಿಂದ ಯುವತಿ ಪಕ್ಷಕ್ಕೆ ದೂರು ನೀಡಿದ್ದಾಳೆ. ಎರಡು ತಿಂಗಳ ಹಿಂದೆ ದೂರು ನೀಡಲಾಗಿದೆ.  ಮೊದಲು ಪಕ್ಷದ ಏರಿಯಾ ಕಮಿಟಿಗೆ ದೂರು ನೀಡಿದ್ದು, ಏರಿಯಾ ಕಮಿಟಿ ಮಾತುಕತೆ ಮೂಲಕ ಇತ್ಯರ್ಥಗೊಳಿಸಲು ಯತ್ನಿಸಿದೆ. ಆದರೆ  ನೇತಾರನ ವಿರುದ್ಧ ಕ್ರಮ ಉಂಟಾಗದುದರಿಂದ ಯುವತಿ ಜಿಲ್ಲಾ  ಸೆಕ್ರೆಟರಿಗೆ ಲಿಖಿತವಾಗಿ ದೂರು ನೀಡಿದ್ದಾಳೆನ್ನಲಾಗಿದೆ. ಇದರಂತೆ ನೇತಾರನ ವಿರುದ್ಧ ಶೀಘ್ರ ಕ್ರಮ ಉಂಟಾಗಲಿದೆಯೆಂಬ ಸೂಚನೆಯಿದೆ.

You cannot copy contents of this page