ಪಯ್ಯನ್ನೂರು: ಪರಶ್ಶಿನಿಕಡವು ವಸತಿಗೃಹದಲ್ಲಿ ಯುವತಿ ಕೊಲೆ ಗೀಡಾದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಚೆರುಕುನ್ನ್ ಅಯ್ಯೋತ್ ಕೊವ್ವುಮ್ಮಲ್ ಹೌಸ್‌ನ ದಿ| ಕೆ. ಸುರೇಶ್‌ರ ಪತ್ನಿ ಕೆ. ಸೀಮ (45) ಕೊಲೆಗೀಡಾದ ಯುವತಿ. ಇವರ ಜೊತೆಯಲ್ಲಿ ಕೊಠಡಿ ಪಡೆದ ಅಯ್ಯೋತ್ ಕಡೆಲ್‌ಪರಂಬಿಲ್ ಹೌಸ್‌ನ ವಿಜಯನ್‌ನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಇಂದು ಬೆಳಿಗ್ಗೆ ಮಾಟುಲ್ ಟೆನ್ತ್ ಸ್ಟ್ರೀಟ್ ಬಳಿಯ ಮರದಲ್ಲಿ ಮೃತದೇಹ ಕಂಡು ಬಂದಿದೆ. ವಸತಿಗೃಹದಲ್ಲಿ ಕೊಲೆಗೈದ ಬಳಿಕ ಹೊರಗಿನಿಂದ ಬಾಗಿಲನ್ನು ಮುಚ್ಚಿ ಈತ ಪರಾರಿಯಾಗಿರ ಬೇಕೆಂದು ಶಂಕಿಸಲಾಗಿದ್ದು, ಈತನ ಪತ್ತೆಗೆ ತಳಿಪರಂಬ ಪೊಲೀಸರು ಸಾರ್ವಜನಿಕರ ಸಹಾಯ ಯಾಚಿಸಿ ದ್ದರು. ಈ ಮಧ್ಯೆ ಇಂದು ಬೆಳಿಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಪರಶ್ಶಿನಿಕಡವು ಲ್ಯಾಂಡಿಂಗ್ ಲಾಡ್ಜ್‌ನಲ್ಲಿ ಘಟನೆ ನಡೆದಿದೆ.
ನಿನ್ನೆ ಮಧ್ಯಾಹ್ನ 12.50ರ ವೇಳೆ ಇವರಿಬ್ಬರೂ ವಸತಿಗೃಹದಲ್ಲಿ ಕೊಠಡಿ ಪಡೆದಿದ್ದರು. ಸಂಜೆ 6.30ರ ವರೆಗೆ ಕೊಠಡಿ ಆಗ್ರಹಿಸಿದ್ದರು. ಆ ಬಳಿಕ ವಸತಿಗೃಹದ ರಿಸೆಪ್ಶನ್ ವಿಚಾರಿಸಿದಾಗ ವಿಜಯನ್ ಮಡಪ್ಪುರವರೆಗೆ ತೆರಳಿ ಶೀಘ್ರ ವಾಪಸಾಗುವುದಾಗಿ ತಿಳಿಸಿ ಅಲ್ಲಿಂದ ತೆರಳಿದ್ದನೆಂದು ನೌಕರ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಆದರೆ ಹೇಳಿದ ಸಮಯ ಕಳೆದರೂ ವಾಪಸಾಗಿರಲಿಲ್ಲ. ವಸತಿಗೃಹದ ನೌಕರ ಮೊಬೈಲ್ ಫೋನ್ ಮೂಲಕ ಸಂಪರ್ಕಿಸಲು ಯತ್ನಿಸಿದರೂ ಸ್ವಿಚ್‌ಆಫ್ ಆಗಿತ್ತೆಂದು ತಿಳಿದು ಬಂದಿತ್ತು. ಶಂಕೆ ತೋರಿದ ನೌಕರ ಕೊಠಡಿಯ ಬಳಿ ತಲುಪಿದಾಗ ಹೊರಗಿನಿಂದ ಬಾಗಿಲು ಮುಚ್ಚಿದ ಸ್ಥಿತಿಯಲ್ಲಿ ಕಂಡು ಬಂದಿದೆ. ಬಳಿಕ ತಳಿಪರಂಬ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಎಸ್‌ಐ ಕೆ. ದಿನೇಶ್‌ರ ನೇತೃತ್ವದಲ್ಲಿ ತಳಿಪರಂಬ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ. ಬಳಿಕ ಕೊಠಡಿಯ ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ಮಂಚದಲ್ಲಿ ಮಲಗಿದ ಸ್ಥಿತಿಯಲ್ಲಿ ಸೀಮ ಕಂಡು ಬಂದಿದ್ದಾರೆ. ಕುತ್ತಿಗೆಯಲ್ಲಿ ಗಾಯಗಳಿರುವುದನ್ನು ಪತ್ತೆಹಚ್ಚಲಾಗಿದೆ. ಈ ಹಿನ್ನೆಲೆಯಲ್ಲಿ ಇದು ಕೊಲೆ ಕೃತ್ಯವೆಂದು ಖಚಿತಪಡಿಸಲಾಗಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.







