ಪತಿ ಮನೆಗೆಂದು ತಿಳಿಸಿ ಹೋದ ಯುವತಿ ನಾಪತ್ತೆ

ಕಾಸರಗೋಡು: ಪತಿಯ ಮನೆಗೆ ಹೋಗುವುದಾಗಿ ತಿಳಿಸಿ   ಮನೆಯಿಂದ ಹೋದ ಯುವತಿ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಕಾಸರಗೋಡು ಕರಂದಕ್ಕಾಡ್‌ನ ಉಮಾವತಿ ಎಂಬವರ ಪುತ್ರಿ ಪ್ರೀತಿಕ (20) ಎಂಬಾಕೆ ನಾಪತ್ತೆಯಾದ ಯುವತಿ.

ಸೋಮವಾರ ಸಂಜೆ 5.30 ರ ವೇಳೆ ಪತಿಯ ಮನೆಗೆ ಹೋಗುವುದಾಗಿ ತಿಳಿಸಿ ಈಕೆ ಮನೆಯಿಂದ ತೆರಳಿದ್ದಳು. ಅನಂತರ  ಪುತ್ರಿ ಮನೆಗೆ ಮರಳಿ ಬಂದಿಲ್ಲವೆಂದು ತಾಯಿನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಕಾಸರಗೋಡು ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

You cannot copy contents of this page