ನಾಲ್ಕೂವರೆ ವರ್ಷದ ಪುತ್ರಿಯನ್ನು ಪತಿಗೆ ನೀಡಿ ಪ್ರಿಯತಮನ ಜೊತೆ ತೆರಳಿದ ಯುವತಿ

ಕಾಸರಗೋಡು: ನಾಲ್ಕೂವರೆ ವರ್ಷದ ಪುತ್ರಿ ಸಹಿತ ನಾಪತ್ತೆಯಾದ ಯುವತಿ ಪ್ರಿಯ ತಮನೊಂದಿಗೆ ನ್ಯಾಯಾಲಯಕ್ಕೆ ಹಾಜರಾಗಿದ್ದಾಳೆ. ನ್ಯಾಯಾಲಯ ಈಕೆಯ ಇಚ್ಚೆಯಂತೆ ತೆರಳಲು ತಿಳಿಸಿದ ಹಿನ್ನೆಲೆಯಲ್ಲಿ ಪುತ್ರಿಯನ್ನು ಪತಿಗೆ ನೀಡಿ ಯುವತಿ ಪ್ರಿಯತಮನ ಜೊತೆ ತೆರಳಿದ್ದಾಳೆ. ದೇಲಂಪಾಡಿ ಮಯ್ಯಳ ನಿವಾಸಿ ಎಸ್.ಎ. ಕಾವ್ಯ (24) ಪ್ರಿಯತಮನಾದ ಅಣ್ಣಪ್ಪಾಡಿಯ ನಿವಾಸಿ ಅಶ್ವತ್ಥ್ ಜೊತೆ ತೆರಳಿದ್ದಾಳೆ. ಈ ತಿಂಗಳ 22ರಂದು ಬೆಳಿಗ್ಗೆ ಕಾವ್ಯ ಪುತ್ರಿಯ ಜೊತೆ ಮನೆಯಿಂದ ತೆರಳಿದ್ದಳು. ಮರಳಿ ಬಾರದ ಹಿನ್ನೆಲೆಯಲ್ಲಿ ಪತಿ ಆದೂರು ಪೊಲೀಸರಿಗೆ ದೂರು ನೀಡಿದ್ದಾರೆ.

ಕಾವ್ಯ ಪ್ರಿಯತಮ ಅಶ್ವತ್ಥ್‌ನ ಜೊತೆ ತೆರಳಿರಬೇಕೆಂಬ ಶಂಕೆಯನ್ನು ದೂರಿನಲ್ಲಿ ವ್ಯಕ್ತಪಡಿಸಲಾಗಿತ್ತು. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದ ಮಧ್ಯೆ ಕಾವ್ಯ ಪುತ್ರಿಯೊಂದಿಗೆ ನ್ಯಾಯಾಲಯದಲ್ಲಿ ಹಾಜರಾಗಿದ್ದಾಳೆ.

You cannot copy contents of this page