ಕಣ್ಣೂರು: ಲೇಡಿಸ್ ಹಾಸ್ಟೆಲ್‌ಗೆ ಅತಿಕ್ರಮಿಸಿ ನುಗ್ಗಿದ ಯುವಕನನ್ನು ಸೆಕ್ಯೂರಿಟಿ ನೌಕರರು ಕೈಯಾರೆ ಸೆರೆಹಿಡಿದ ಘಟನೆ ನಡೆದಿದೆ. ನಿನ್ನೆ ರಾತ್ರಿ 10 ಗಂಟೆ ವೇಳೆ ತಾವಕ್ಕರದಲ್ಲಿ ಕಾರ್ಯಾಚರಿಸುವ ಮಹಿಳಾ ಹಾಸ್ಟೆಲ್‌ಗೆ ಯುವಕ ಅತಿಕ್ರಮಿಸಿ ನುಗ್ಗಿದ್ದನು. ಕಣ್ಣೂರು ನಗರ ವ್ಯಾಪ್ತಿಯಲ್ಲಿ ವಾಸಿಸುವ ಯುವಕ ಹಾಸ್ಟೆಲ್‌ಗೆ ನುಗ್ಗಿದ್ದು, ಈ ವಿಷಯ ತಿಳಿದು ಹಾಸ್ಟೆಲ್ ನೌಕರರು ಆತನನ್ನು ಸೆರೆ ಹಿಡಿದಿದ್ದಾರೆ.ಜೀಪೊಂದರಲ್ಲಿ ತಲುಪಿದ ವ್ಯಕ್ತಿ ಹಾಸ್ಟೆಲ್ ಸಮೀಪ ನಿಲ್ಲಿಸಿ ಆವರಣಗೋಡೆ ದಾಟಿ ಹಾಸ್ಟೆಲ್‌ನೊ ಳಗೆ ನುಗ್ಗಿದ್ದಾನೆನ್ನಲಾಗಿದೆ. ಹಾಸ್ಟೆಲ್‌ನಲ್ಲಿದ್ದ ಕೆಲವು ಹೆಣ್ಮಕ್ಕಳು ಈತನನ್ನು ಕಂಡು ವಾರ್ಡನ್‌ಗೆ ತಿಳಿಸಿದ್ದರು. ವಾರ್ಡನ್ ನೀಡಿದ ಮಾಹಿತಿಯಂತೆ ಸೆಕ್ಯೂರಿಟಿ ನೌಕರರು ತಲುಪಿ ಯುವಕನನ್ನು ಸೆರೆ ಹಿಡಿದಿದ್ದಾರೆ. ಈತನನ್ನು ಪೊಲೀಸರಿ ಗೊಪ್ಪಿಸಿದ್ದು ತನಿಖೆ ನಡೆಸಲಾಗುತ್ತಿದೆ.
