ಕುಂಬಳೆ: ಆಸ್ಪತ್ರೆಯಲ್ಲಿ ದಾದಿಯೊಂದಿಗೆ ಅನುಚಿತವಾಗಿ ವರ್ತಿಸಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಸೂರಂಬೈಲು ನಿವಾಸಿ ಸಂತೋಷ್ ಕುಮಾರ್ (30) ಎಂಬಾತ ಸೆರೆಗೀಡಾದ ವ್ಯಕ್ತಿ ಎಂದು ಕುಂಬಳೆ ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ಆಸ್ಪತ್ರೆಯಲ್ಲಿ ದಾಖಲಾದ ವ್ಯಕ್ತಿಗೆ ಸಹಾಯಕನಾಗಿ ತಲುಪಿದ ಈತ ರೋಗಿಯ ಸಮೀಪದಲ್ಲಿದ್ದ ದಾದಿಯನ್ನು ಅಪ್ಪಿ ಹಿಡಿಯಲು ಪ್ರಯತ್ನಿಸಿದ್ದಾನೆಂದು ದೂರಲಾಗಿದೆ.
ಈ ಬಗ್ಗೆ 21ರ ಹರೆಯದ ದಾದಿ ನೀಡಿದ ದೂರಿನಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಳಿಕ ನ್ಯಾಯಾಲಯದಲ್ಲಿ ಹಾಜರುಪಡಿಸಿದ ಆರೋಪಿಗೆ ರಿಮಾಂಡ್ ವಿಧಿಸಲಾಗಿದೆ.







