ಮುಳ್ಳೇರಿಯ:15ರ ಹರೆಯದ ಬಾಲಕಿಗೆ ಕಿರುಕುಳ ನೀಡಿದ ಆರೋಪದಂತೆ ಯುವಕನನ್ನು ಪೋಕ್ಸೋ ಪ್ರಕಾರ ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಕಿನ್ನಿಂಗಾರು ನೆಟ್ಟಣಿಗೆ ಈಂದುಮೂಲೆ ನಿವಾಸಿ ಶ್ರೀಕೃಷ್ಣ ಯಾನೆ ಸುಮಂತ್ (21) ಎಂಬಾತನನ್ನು ಬದಿಯಡ್ಕ ಇನ್‌ಸ್ಪೆಕ್ಟರ್ ಸತೀಶ್ ಕುಮಾರ್ ನೇತೃತ್ವದಲ್ಲಿ ಎಸ್‌ಐ ರಾಜೇಶ್ ಬಂಧಿಸಿದ್ದಾರೆ. ಈ ತಿಂಗಳ 14ರಂದು ಶ್ರೀಕೃಷ್ಣ ೧೫ರ ಹರೆಯದ ಬಾಲಕಿಗೆ ಕಿರುಕುಳ ನೀಡಿರುವುದಾಗಿ ದೂರಲಾಗಿದೆ. ಇದರಂತೆ ಬದಿಯಡ್ಕ ಪೊಲೀಸರು ಪೋಕ್ಸೋ ಕೇಸು ದಾಖಲಿಸಿಕೊಂಡಿದ್ದರು. ಇದನ್ನರಿತ ಆರೋಪಿ ತಲೆಮರೆಸಿಕೊಂಡಿದ್ದನು. ಇದರಿಂದ ಎಎಸ್‌ಐ ಪಿ.ಕೆ. ಪ್ರಸಾದ್ ನೇತೃತ್ವದ ಪೊಲೀಸರು ಶೋಧ ನಡೆಸಿ ಕರ್ನಾಟಕದ ಕುಂಬ್ರದಿಂದ ಆರೋಪಿ ಯನ್ನು ಬಂಧಿಸಿದ್ದಾರೆ. ಬಳಿಕ ಆರೋಪಿಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು.






