ನಿಲ್ಲಿಸಿದ್ದ ಆಂಬುಲೆನ್ಸ್ ಕಳವುಗೈದ ಯುವಕ ಸೆರೆ

ಮಂಗಳೂರು: ನಿಲ್ಲಿಸಿದ್ದ ಆಂಬುಲೆನ್ಸ್‌ನ್ನು ಕಳವುಗೈದು ಕೊಂಡೊಯ್ದ ಯುವಕನೋರ್ವ ಸೆರೆಗೀಡಾಗಿದ್ದಾನೆ. ಕಾರ್ಕಳ ನಿವಾಸಿಯಾದ ಶೋಡನ್ (22) ಎಂಬಾತ ಸೆರೆಗೀಡಾದ ವ್ಯಕ್ತಿ. ಕಡಬದ    ಶಿರಾಡಿ ನಿವಾಸಿ ಸುರೇಶ್ (46) ನೀಡಿದ ದೂರಿನಂತೆ ಶೋಡನ್‌ನನ್ನು ಬಂಧಿಸಲಾಗಿದೆ. ಈ ತಿಂಗಳ ೧೯ರಂದು  ಆಂಬುಲೆನ್ಸ್ ಕಳವಿಗೀ ಡಾಗಿದೆ.  ಅಪಘಾತವೊಂದಕ್ಕೆ ಸಂಬಂಧಿಸಿ ತುರ್ತು ಕರೆ ಬಂದ ಹಿನ್ನೆಲೆಯಲ್ಲಿ ಗುಂಡ್ಯ ಚೆಕ್ ಪೋಸ್ಟ್ ಸಮೀಪ ಆಂಬುಲೆನ್ಸ್ ನಿಲ್ಲಿಸಲಾಗಿತ್ತು.  ಬೇರೊಬ್ಬ ಚಾಲಕ ಶೀಘ್ರ ಅಲ್ಲಿಗೆ ತಲುಪುವನೆಂದು ತಿಳಿಸಿದ ಹಿನ್ನೆಲೆಯಲ್ಲಿ ಸುರೇಶ್ ಕೀಲಿಕೈಯನ್ನು ಆಂಬುಲೆನ್ಸ್‌ನೊಳಗೆ ಇರಿಸಿ ಮನೆಗೆ ಹೋಗಿದ್ದರು.    20ರಂದು ಬೆಳಿಗ್ಗೆ ಅಲ್ಲಿಗೆ ಮರಳಿ ಬಂದಾಗ  ಆಂಬುಲೆನ್ಸ್ ನಾಪತ್ತೆಯಾಗಿತ್ತು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಯಿತು. ಬಳಿಕ ಹಾಸನ ಜಿಲ್ಲಾ ಪೊಲೀಸರ ಸಹಾಯದೊಂದಿಗೆ ನಡೆಸಿದ ತನಿಖೆಯಲ್ಲಿ ಆರೋಪಿ ಯನ್ನು ಸೆರೆಹಿಡಿಯಲಾಗಿದೆ.

RELATED NEWS

You cannot copy contents of this page