ಕಾಸರಗೋಡು: ಕ್ರಿಸ್ಮಸ್, ಹೊಸ ವರ್ಷದಂಗವಾಗಿ ಅಬಕಾರಿ ಅಧಿಕಾರಿಗಳು ಆರಂಭಿಸಿದ ಸ್ಪೆಷಲ್ ಡ್ರೈವ್‌ನ ವೇಳೆ ಮಂಜೇಶ್ವರ ಚೆಕ್‌ಪೋಸ್ಟ್‌ನಲ್ಲಿ ನಡೆಸಿದ ತಪಾಸಣೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಗಾಂಜಾ ಸಾಗಿಸುತ್ತಿದ್ದ ಯುವಕನನ್ನು ಸೆರೆಹಿಡಿಯಲಾಗಿದೆ. ಉತ್ತರ ಪ್ರದೇಶದ ಮೊರಾದಾಬಾದ್ ಮಹ್ಲಾಕ್‌ಪುರ್ ಮಾಫಿ ನಿವಾಸಿಯಾದ ನಾಜಿರ್ (35) ಎಂಬಾತ ಸೆರೆಗೀಡಾದ ವ್ಯಕ್ತಿ.ನಿನ್ನೆ ಬೆಳಿಗ್ಗೆ ೧೦ ಗಂಟೆ ವೇಳೆ ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್‌ನ ಇನ್‌ಸ್ಪೆಕ್ಟರ್ ಸಂತೋಷ್ ಕುಮಾರ್ ಹಾಗೂ ತಂಡ ನಡೆಸಿದ ಕಾರ್ಯಾಚರಣೆ ವೇಳೆ ಗಾಂಜಾ ಸಾಗಾಟ ಪತ್ತೆಯಾಗಿದೆ. ಮಂಜೇಶ್ವರ, ಕುಂಬಳೆ ಭಾಗದ ಯುವಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ನೀಡಲೆಂದು ಗಾಂಜಾವನ್ನು ಸಣ್ಣ ಪ್ಯಾಕೆಟ್‌ಗಳಲ್ಲಾಗಿ ತುಂಬಿಸಿ ಯುವಕ ಕೈವಶವಿರಿಸಿಕೊಂಡಿದ್ದನು. ಈತ ನೀರ್ಚಾಲು ಭಾಗದ ಕ್ಷೌರದಂ ಗಡಿಯ ನೌಕರನಾಗಿ ದ್ದಾನೆ. ಆರೋಪಿಯನ್ನು ಹಾಗೂ ಪ್ರಕರಣವನ್ನು ಕುಂಬಳೆ ರೇಂಜ್‌ಗೆ ಹಸ್ತಾಂತರಿಸಲಾಗಿದೆ. ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಗೋಪಿರತೀಶ್, ಎ.ವಿ.ಪ್ರಶಾಂತ್ ಕುಮಾರ್, ಪ್ರಿವೆಂಟೀವ್ ಆಫೀಸರ್ (ಗ್ರೇಡ್) ಕೆ. ನೌಶಾದ್,ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ಕೆ.ಎ. ಜನಾರ್ದನನ್ ಎಂಬಿವರು ಕಾರ್ಯಾಚರಣೆ ನಡೆಸಿದ್ದಾರೆ.







