ಪೊಲೀಸರನ್ನು ಕಂಡು ಪರಾರಿಯಾಗಲೆತ್ನ ಎಂಡಿಎಂಎ ಸಹಿತ ಯುವಕ ಸೆರೆ

ಬದಿಯಡ್ಕ: 3.01 ಗ್ರಾಂ ಎಂಡಿಎಂಎ ಹಾಗೂ 16,700 ರೂಪಾಯಿ ಸಹಿತ ಯುವಕನನ್ನು  ಬಂಧಿಸಲಾಗಿದೆ. ಚೆಂಗಳ ರಹ್ಮತ್ ನಗರದ ಮನಿಯಡ್ಕಂ ನಿವಾಸಿ  ಸಿ.ಝೆಡ್. ನುಹ್‌ಮ (25) ಎಂಬಾತನನ್ನು ಬದಿಯಡ್ಕ ಪೊಲೀಸ್ ಇನ್‌ಸ್ಪೆಕ್ಟರ್  ಅನೂಪ್ ನೇತೃತ್ವದ ತಂಡ ಬಂಧಿಸಿದೆ. ನಿನ್ನೆ ಮಧ್ಯಾಹ್ನ 1.30ರ ವೇಳೆ ನೀರ್ಚಾಲು ಬಳಿಯ ಕನ್ಯೆಪ್ಪಾಡಿಯಿಂದ ಈತನನ್ನು ಬಂಧಿಸಲಾಗಿದೆ. ಎಸ್‌ಐ ಪಿ. ರೂಪೇಶ್ ಹಾಗೂ  ಪೊಲೀಸರು ಪಟ್ರೋಲಿಂಗ್ ನಡೆಸುತ್ತಾ ಕನ್ಯೆಪ್ಪಾಡಿಗೆ ತಲುಪಿದ್ದರು. ಈ ವೇಳೆ ಅಲ್ಲಿದ್ದ ಯುವಕ ಪೊಲೀಸರನ್ನು ಕಂಡು  ಓಡಿ ಪರಾರಿಯಾಗಲು ಯತ್ನಿಸಿದ್ದನು. ಇದರಿಂದ ಸಂಶಯಗೊಂಡ ಪೊಲೀಸರು ಆತನನ್ನು ಬೆನ್ನಟ್ಟಿ ಸೆರೆಹಿಡಿದು ತಪಾಸಣೆ ನಡೆಸಿದಾಗ ಎಂಡಿಎಂಎ ಹಾಗೂ ಮಾದಕವಸ್ತು ಮಾರಾಟಗೈದು ಲಭಿಸಿದ ಹಣ ಪತ್ತೆಯಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ತಂಡದಲ್ಲಿ  ಸ್ಕ್ವಾಡ್ ಸದಸ್ಯರಾದ ಗೋಕುಲ್, ಶ್ರುತಿ ಹಾಗೂ ಜಿಲ್ಲಾ  ಪೊಲೀಸ್ ವರಿಷ್ಠಾಧಿ ಕಾರಿಯ ಸ್ಕ್ವಾಡ್ ಸದಸ್ಯರಿದ್ದರು.

You cannot copy contents of this page