ವಿದ್ಯುತ್ ಕಂಬಕ್ಕೆ ಬೈಕ್ ಢಿಕ್ಕಿ ಹೊಡೆದು ಯುವಕ ಮೃತ್ಯು: ಸ್ನೇಹಿತನಿಗೆ ಗಂಭೀರ ಗಾಯ

ಕಾಸರಗೋಡು: ಬೈಕ್ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಯುವಕ ಮೃತಪಟ್ಟ ದಾರುಣ ಘಟನೆ ವೆಳ್ಳರಿಕುಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಮಾಲೋತ್ ಎಂಬಲ್ಲಿ ಸಂಭವಿಸಿದೆ. ಜೊತೆಗಿದ್ದ ಸ್ನೇಹಿತ ಗಂಭೀರ ಗಾಯಗೊಂಡಿದ್ದಾನೆ. ಮಾಲೋತ್‌ನ ಬಿನು ಕುಮಾರ್ – ಲತಾ ದಂಪತಿಯ ಪುತ್ರ ಮಿಥುನ್‌ರಾಜ್ (20) ಮೃತಪಟ್ಟ ದುರ್ದೈವಿಯಾಗಿದ್ದಾನೆ. ಗಂಭೀರ ಗಾಯಗೊಂಡ ಸಚ್ಚು ಎಂಬಾತನನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇಂದು ಮುಂಜಾನೆ 1 ಗಂಟೆ ವೇಳೆ ಅಪಘಾತವುಂಟಾಗಿದೆ.

ಕ್ರಿಸ್ಮಸ್ ಕರೋಲ್ ತಂಡದೊಂದಿಗೆ ಸಕ್ರಿಯವಾಗಿ ಪಾಲ್ಗೊಂಡಿದ್ದ ಇವರು ಬಳಿಕ ಮಾಲೋತ್‌ಗೆ ತೆರಳುತ್ತಿದ್ದರು.  ಇವರು ಸಂಚರಿಸುತ್ತಿದ್ದ ಬೈಕ್ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಅಪಘಾತವುಂಟಾಗಿದೆ.

RELATED NEWS

You cannot copy contents of this page