ಶಾಲಾ ಬಸ್ -ಬೈಕ್ ಢಿಕ್ಕಿ ಹೊಡೆದು ಯುವಕ ಮೃತ್ಯು

ಮುಳ್ಳೇರಿಯ:  ಶಾಲಾ ಬಸ್  ಹಾಗೂ ಬೈಕ್ ಢಿಕ್ಕಿ ಹೊಡೆದು  ಗಾಳಿಮುಖ ಬಳಿಯ ನಿವಾಸಿ ಯುವಕ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.  ಗಾಳಿಮುಖ ಗೋಳಿ ತ್ತಡಿ ಪುದಿಯವಳಪ್ಪ್‌ನ ಶಮ್ಮಾಸ್ ಅಬ್ದುಲ್ಲ (25) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇಂದು ಬೆಳಿಗ್ಗೆ  9 ಗಂಟೆ ವೇಳೆ ಬೋವಿಕ್ಕಾನ ಬಳಿಯ ಮಾಸ್ತಿಕುಂಡ್ ನಲ್ಲಿ     ಕುನಿಲ್ ಶಾಲೆಯ ಬಸ್ ಹಾಗೂ  ಬೈಕ್ ಢಿಕ್ಕಿ ಹೊಡೆದು   ಅಪಘಾತ ಸಂಭವಿಸಿದೆ.  ಅಪಘಾತದಲ್ಲಿ ಗಂಭೀರ ಗಾಯಗೊಂಡ ಶಮ್ಮಾಸ್ ಅಬ್ದುಲ್ಲರನ್ನು ತಕ್ಷಣ ಸ್ಥಳೀಯರ ನೇತೃತ್ವದಲ್ಲಿ  ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.  ಅಪಘಾತದಿಂದಾಗಿ ಅಲ್ಪ ಹೊತ್ತು ಸಾರಿಗೆ ಅಡಚಣೆ ಎದುರಾಯಿತು.

ಕಲ್ಲಿಕೋಟೆಯ ಪಾನೀಯದಂಗಡಿ ಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಶಮ್ಮಾಸ್ ಅಬ್ದುಲ್ಲ ಇಂದು ಬೆಳಿಗ್ಗೆ ಕಾಸರಗೋ ಡಿನಲ್ಲಿ ರೈಲು ಇಳಿದು ಬೈಕ್‌ನಲ್ಲಿ  ಗಾಳಿಮುಖದತ್ತ ಸಂಚರಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ಶಾಫಿ-ಬೀಫಾತಿಮ ದಂಪತಿ ಯ ಪುತ್ರನಾದ ಮೃತರು ಪತ್ನಿ ಬೀಫಾತಿಮ, ಸಹೋದರ-ಸಹೋ ದರಿಯರಾದ ಸಿನ್‌ಸಾದ್, ಸೈಮ, ಸಫ, ಖದೀಜ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page