ಕರ್ನಾಟಕ ಆರ್‌ಟಿಸಿಯಲ್ಲಿ ಪ್ರಯಾಣ ದರ ಹೆಚ್ಚಳ ವಿರುದ್ಧ ಯೂತ್ ಲೀಗ್ ಪ್ರತಿಭಟನೆಯತ್ತ

ಕುಂಬಳೆ: ಆರಿಕ್ಕಾಡಿಯಲ್ಲಿ ಕಾನೂನು ವಿರುದ್ಧವಾಗಿ ಆರಂಭಿಸಿದ ಟೋಲ್ ಸಂಗ್ರಹ ಹೆಸರಲ್ಲಿ ಕರ್ನಾಟಕ ರಾಜ್ಯ ಸಾರಿಗೆ ಸ್‌ನಲ್ಲಿ ಪ್ರಯಾಣದರ ಹೆಚ್ಚಿಸಿರುವುದು   ಖಂಡನೀಯವೆಂದು ಮುಸ್ಲಿಂ ಯೂತ್ ಲೀಗ್ ಮಂಜೇಶ್ವರ ಮಂಡಲ ಸಮಿತಿ ತಿಳಿಸಿದೆ. ಟೋಲ್   ಪ್ಲಾಸಾ ಸಮೀಪ ಸರ್ವೀಸ್ ರೋಡ್ ನಿರ್ಮಿಸದ ಲೋಪದಿಂದ ಜನಸಾಮಾನ್ಯರಾದ ಪ್ರಯಾಣಿಕರು ದಂಡ ನೀಡಬೇಕಾಗಿ ಬರುತ್ತಿರುವು ದನ್ನು ಅಂಗೀಕರಿಸಲು ಸಾಧ್ಯವಿಲ್ಲ. ಈ ವಿಷಯದಲ್ಲಿ ಕೇರಳ ಸರಕಾರ ತುರ್ತು ಕ್ರಮ ಕೈಗೊಳ್ಳಬೇಕೆಂದೂ ಕರ್ನಾಟಕ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಅನ್ಯಾಯ ರೀತಿಯಲ್ಲಿ ಪ್ರಯಾಣದರ ಹೆಚ್ಚಿಸಿರುವುದನ್ನು ಹಿಂತೆಗೆಯುವಂತೆ ಮಾಡಬೇಕೆಂದು ಯೂತ್ ಲೀಗ್ ಒತ್ತಾಯಿಸಿದೆ.  ಜನಸಾಮಾನ್ಯರ ಸಂಕಷ್ಟಗಳನ್ನು ಪರಿಗಣಿಸಿ ಹೆಚ್ಚುವರಿ ದರ ವಸೂಲಿ ಮಾಡುವುದನ್ನು ಕೊನೆಗೊಳಿ ಸದಿದ್ದಲ್ಲಿ ತೀವ್ರ ಪ್ರತಿಭಟನೆ ನಡೆಸುವುದಾಗಿ ಮುಸ್ಲಿಂ ಯೂತ್ ಲೀಗ್ ಮಂಜೇಶ್ವರ ಮಂಡಲ ಅಧ್ಯಕ್ಷ ಬಿ.ಎಂ. ಮುಸ್ತಫ, ಪ್ರಧಾನ ಕಾರ್ಯದರ್ಶಿ ಸಿದ್ದಿಕ್ ದಂಡೆಗೋಳಿ ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಸಾರಿಗೆ ಬಸ್‌ನಲ್ಲಿ ಪ್ರಯಾಣ ದರ ಹೆಚ್ಚಿಸಿರುವ ಬಗ್ಗೆ ‘ಕಾರವಲ್’ ಮೀಡಿಯಾ ಮಲೆಯಾಳ ಆನ್‌ಲೈನ್ ಮೊದಲು ವರದಿ ಮಾಡಿದ್ದು ಇದು ಗಮನಕ್ಕೆ ಬಂದ ಬಳಿಕ ಯೂತ್ ಲೀಗ್  ದರ ಹೆಚ್ಚಳ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿದೆ.

You cannot copy contents of this page