ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರೊ. ಪಿ. ಶ್ರೀಕೃಷ್ಣ ಭಟ್‌ರಿಗೆ ಸಾಹಿತ್ಯ ಸಾಧಕ ಸನ್ಮಾನ

ಕಾಸರಗೋಡು: ಸುವರ್ಣ ಮಹೋತ್ಸವ ಸ್ಮಾರಕ ಸಾಹಿತ್ಯ ಸಾಧಕ ಸನ್ಮಾನಕ್ಕೆಕಾಸರಗೋಡಿನ ಹಿರಿಯ ವಿದ್ವಾಂಸ, ನಿವೃತ್ತಕನ್ನಡಪ್ರಾಧ್ಯಾಪಕ ಪ್ರೊ.ಪಿ.ಶ್ರೀಕೃಷ್ಣ ಭಟ್ ಆಯ್ಕೆಯಾಗಿ ದ್ದಾರೆ. ದಶಂಬರ 20 ರಂದು ಮಂಡ್ಯದಲ್ಲಿ ಜರಗಲಿರುವ ಅಖಿಲ ಭಾರತಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು ಹಾಗೂ ಶ್ರೀ ತೋಂಟದ ಸಿದ್ಧರಾಮ ಸ್ವಾಮಿಗಳ Àಉಪ್ಛನಿತಿಯಲ್ಲಿ ಕರ್ನಾಟಕ ಸರಕಾರದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಸಾಧಕರನ್ನು ಸನ್ಮಾನಿಸಲಿದ್ದಾರೆ.
ಪ್ರೊ.ಪಿ.ಶ್ರೀಕೃಷ್ಣ ಭಟ್ ಕುಂಬ್ಡಾಜೆ ಗ್ರಾಮದ ಪುತ್ರೋಡಿಯಲ್ಲಿ 1943ರಲ್ಲಿ ಜನಿಸಿ, ಏತಡ್ಕ ಎಯುಪಿ ಶಾಲೆ, ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಹೈಸ್ಕೂಲುಗಳಲ್ಲಿ ಪ್ರಾಥಮಿಕ ಶಿಕ್ಷಣ, ಧಾರವಾಡದ ಕರ್ನಾಟಕ ವಿಶ್ವದ್ಯಾಲಯ ದಿಂದ ಕನ್ನಡದಲ್ಲಿ ಬಿ.ಎ. ಪದವಿ ಮತ್ತು ಸ್ನಾತಕೋತ್ತರ ಪದವಿ, ಮೈಸೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದವರು. ಸುರತ್ಕಲ್ಲಿನ ಗೋವಿಂದದಾಸ ಕಾಲೇಜಿನಲ್ಲಿ ಒಂದು ವರ್ಷ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. 1970ರಲ್ಲಿ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದಲ್ಲಿ ಕನ್ನಡ ಉಪನ್ಯಾಸಕರಾಗಿ ಸೇರಿ, ಅನಂತರ ವಿಭಾಗದ ಮುಖ್ಯಸ್ಥ ರಾದರು. ಸುದೀರ್ಘ 28 ವರ್ಷಗಳ ಅಧ್ಯಾಪನದಲ್ಲಿ ಸಾವಿರಾರು ಶಿಷ್ಯರಿಗೆ ವಿದ್ಯಾದಾನಮಾಡಿದ್ದಾರೆ. 1998ರಲ್ಲಿ ನಿವೃತ್ತರಾದ ಪ್ರೊ.ಶ್ರೀಕೃಷ್ಣ ಭಟ್ ಕಣ್ಣೂರು ವಿಶ್ವವಿದ್ಯಾಲಯದ ಭಾರತೀಯ ಭಾಷಾ ಅಧ್ಯಯನಾಂಗವು ಸ್ಥಾಪನೆಯಾಗಲು ಪ್ರಯತ್ನಿಸಿದರು. ಆ ಸಂಸ್ಥೆಯ ಸ್ಥಾಪಕ ನಿರ್ದೇಶಕರಾಗಿ ಹತ್ತು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದರು. ಸಂಶೋಧನ ಮಾರ್ಗ ದರ್ಶಕರಾಗಿ ಕಲ್ಲಿಕೋಟೆ ಮತ್ತು ಕಣ್ಣೂರು ವಿಶ್ವವಿದ್ಯಾಲಯಗಳಲ್ಲಿ 11 ಪಿಎಚ್‌ಡಿ ಸಂಶೋಧ ಕರಿಗೆ ಮಾರ್ಗ ದರ್ಶನ ಮಾಡಿದರು. ಅವರ ಮಾರ್ಗ ದರ್ಶನದಲ್ಲಿ 16 ಮಂದಿ ವಿದ್ಯಾರ್ಥಿ ಗಳು ಕಣ್ಣೂರು ವಿಶ್ವವಿದ್ಯಾಲಯದಿಂದ ಎಂ.ಫಿಲ್ ಪದವಿಗಳನ್ನು ಪಡೆದುಕೊಂಡರು. ಕೇರಳ ಸರಕಾರದ ಕನ್ನಡ ಪಠ್ಯಪುಸ್ತಕ ರಚನಾ ಸಮಿತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಸುದೀರ್ಘಕಾಲ ಸೇವೆ ಸಲ್ಲಿಸಿದ್ದಾರೆ.
ಕನ್ನಡ ವ್ಯಾಕರಣ ಪರಂಪರೆಯ ಮೇಲೆ ಸಂಸ್ಕೃತದ ಪ್ರಭಾವ, ಕನ್ನಡ ಸಾಂಪ್ರದಾಯಿಕ ವ್ಯಾಕರಣಗಳು, ಶಾಸ್ತç ಸಾಹಿತ್ಯ ವಿಹಾರ, ಅವಲೋಕನ, ಕಳ್ಳಿಗೆ ಮಹಾಬಲ ಭಂಡಾರಿ, ಪ್ರೊ.ಪಿ. ಸುಬ್ರಾಯ ಭಟ್, ಶಾಸನಗಳು ಮತ್ತು ವೀರಗಲ್ಲುಗಳು ಅವರ ಪ್ರಕಟಿತ ಕೃತಿ ಗಳು. ಆಲೋಕನ ಎಂಬ ಸಂಶೋಧನ ಮತ್ತು ಸಂಕೀರ್ಣ ಬರಹಗಳ ಸಂಕಲನ ಬಿಡುಗಡೆಗೆ ಸಿದ್ಧವಾಗಿದೆ. ಶಂಕರ ಸಾಹಿತ್ಯ ಪ್ರಶಸ್ತಿ, ಕೇಶವ ಪ್ರಶಸ್ತಿ, ಸಾಧಕ ಶಿಕ್ಷಕ ಪ್ರಶಸ್ತಿ, ಶಾಸ್ತç ಸಾಧಕ ಸನ್ಮಾನ, ಟಿ.ವಿ.ವೆಂಕಟಾಚಲ ಶಾಸ್ತಿç ವಿದ್ವತ್‌ದತ್ತಿ ಪ್ರಶಸ್ತಿ, ಮಿತ್ತೂರುಶಂಕರನಾರಾಯಣ ಶಾಸ್ತç ವಿದ್ವತ್ ಪ್ರಶಸ್ತಿಗಳನ್ನು ಪಡೆದು ಕೊಂಡಿದ್ದಾರೆ. ಪ್ರೊ.ಪಿ.ಶ್ರೀಕೃಷ್ಣ ಭಟ್‌ರ ಸಹಸ್ರ ಚಂದ್ರದರ್ಶನ ಅಭಿನಂದನ ಸಮಾರಂಭ 2025 ಜನವರಿ 5ರಂದು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ವಿದ್ಯಾಲಯದಲ್ಲಿ ಜರಗಲಿದೆ. ಪ್ರೊ.ಪಿ.ಶ್ರೀಕೃಷ್ಣಭಟ್‌ರನ್ನು ಅಭಿನಂದನ ಸಮಿತಿಯ ಅಧ್ಯಕ್ಷ ಪ್ರೊ. ಪಿ.ಎನ್. ಮೂಡಿತ್ತಾಯ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page