ಅಡೂರು ಕ್ಷೇತ್ರ ಮೂಲಸ್ಥಾನ ಕೌಂಡಿಕಾನ ಯಾತ್ರೆ ಮಹಾಸಭೆ, ಬಲಿವಾಡು ಕೂಟ 13ರಂದು

ಅಡೂರು: ಶ್ರೀ ಮಹತೋಭಾರ ಮಹಾಲಿಂಗೇಶ್ವರ ಮಹಾವಿಷ್ಣು ವಿನಾಯಕ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಆಶ್ರಯದಲ್ಲಿ ಮೂಲಸ್ಥಾನ ಕೌಂಡಿಕಾನ ಯಾತ್ರೆ ಜನವರಿ 14ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈ ತಿಂಗಳ 13ರಂದು ಮಹಾಸಭೆ ಮತ್ತು ಬಲಿವಾಡು ಕೂಟ ಕ್ಷೇತ್ರದಲ್ಲಿ ನಡೆಯಲಿದ್ದು, ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಭಾಗವಹಿಸಿ ಆಶೀರ್ವಚನ ನೀಡುವರು.

ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಮೂಲಸ್ಥಾನ ಯಾತ್ರೆ ಪೂರ್ವತಯಾರಿ ಬಗ್ಗೆ ಮಾಹಿತಿ ನೀಡುವರು. ಬೆಳಿಗ್ಗೆ 10 ಗಂಟೆಗೆ ಎಡನೀರು ಶ್ರೀಗಳಿಗೆ ಪೂರ್ಣಕುಂಬ ಸ್ವಾಗತ, ಬಳಿಕ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಸಂತ ಪೈ ಬದಿಯಡ್ಕ ಇವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಭಾಗವಹಿಸುವರು. ಅಲ್ಲದೆ ಗಣ್ಯರಾದ ಕುಳೂರು ಸದಾಶಿವ ಶೆಟ್ಟಿ, ಕೃಷ್ಣ ಪ್ರಸಾದ್ ರೈ ಕುತ್ತಿಕ್ಕಾರು, ಸುರೇಶ್ ಕಾಸರಗೋಡು, ರಾಜೇಶ್ ಟಿ. ಉಪಸ್ಥಿತರಿರುವರು.

You cannot copy contents of this page