ಅಧ್ಯಾಪಕ ಕಳ್ಳನೋಟು ಸಹಿತ ಸೆರೆ

ಕಲ್ಲಿಕೋಟೆ: ಕಳ್ಳನೋಟು ಪತ್ತೆಯಾದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದ ಶಾಲಾ ಅಧ್ಯಾಪಕನ ಮನೆಯಲ್ಲಿ ಮತ್ತೆ ಕಳ್ಳನೋಟು ಪತ್ತೆಯಾಗಿದೆ. ಈಂಗಾಪುಳ ಕುಂಞಿಕುಳಂ ನಿವಾಸಿ ಹಿಶಾಂ ಎಂಬವರ ಮನೆಯಿಂದ 17.38 ಲಕ್ಷ ರೂಪಾಯಿ ಕಳ್ಳನೋಟು ವಶಪಡಿಸಲಾಗಿದೆ. ಇದೇ ರೀತಿಯ ಪ್ರಕರಣಕ್ಕೆ ಸಂಬಂಧಿಸಿ ಸೆರೆಗೀಡಾದ ಈತ ಒಂದು ತಿಂಗಳ ಹಿಂದೆಯಷ್ಟೇ ಜಾಮೀನಿನಲ್ಲಿ ಬಿಡುಗಡೆಗೊಂ ಡಿದ್ದನು. ಕಳ್ಳನೋಟು ಪತ್ತೆಯಾದ ಹಿನ್ನೆಲೆಯಲ್ಲಿ ಈತನನ್ನು ಸೇವೆಯಿಂದ ಅಮಾನತು ಗೊಳಿಸಲಾಗಿತ್ತು. ಹಿಶಾಂನ ತಂದೆ ಶಾಲಾ ಅಧ್ಯಾಪಕನಾಗಿದ್ದ ವೇಳೆ ಮೃತಪಟ್ಟ ಹಿನ್ನೆಲೆಯಲ್ಲಿ ಆಶ್ರಿತ ನೇಮಕಾತಿ ಮೂಲಕ ಈತನಿಗೆ ಉದ್ಯೋಗ ಲಭಿಸಿತ್ತೆನ್ನಲಾಗಿದೆ.

RELATED NEWS

You cannot copy contents of this page