ಅನಾಡಿಪಳ್ಳ ಶ್ರೀ ಈರ್ವರು ಉಳ್ಳಾಕ್ಲು ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ
ಸೀತಾಂಗೋಳಿ : ದೇವಸ್ಥಾನ ಗಳು, ದೈವಸ್ಥಾನಗಳು ಜೀರ್ಣೋ ದ್ಧಾರಗೊಳ್ಳುತ್ತಿರುವುದು ಊರಿನ ಸುಭಿಕ್ಷೆಯ ಸಂಕೇತವಾಗಿದೆ. ಭಕ್ತರ ಸಂಕಷ್ಟಗಳನ್ನು ನಿವಾರಿಸಿ ಅವರ ಭಯಾತಂಕಗಳನ್ನು ದೂರಮಾಡಿ ಅವರ ರಕ್ಷಣೆ ಮಾಡಲು ಅವತರಿಸಿದ ಶ್ರೀ ಈರ್ವರು ಉಳ್ಳಾಕ್ಲು ಮತ್ತು ಪರಿವಾರ ದೈವಗಳ ಬನದ ಪುನರ್ ಪ್ರತಿಷ್ಠೆ ನಡೆಯುತ್ತಿರುವುದು ಊರಿನ ಆಯನವಾಗಿ ಬದಲಾಗಬೇಕು. ಪ್ರತೀ ಮನೆ ಮನ ಬೆಳಗುವಂತಾಗಬೇಕು. ಎಲ್ಲರೂ ಒಗ್ಗಟ್ಟಿನಿಂದ ಈ ಭಗವ ತ್ಕಾರ್ಯದಲ್ಲಿ ಕೈ ಜೋಡಿಸೋಣ ಎಂದು ಶಡ್ರಂಪಾಡಿ ಶ್ರೀ ಗೋಪಾಲಕೃಷ್ಣ ದೇವಾಲಯದ ಸೇವಾಸಮಿತಿ ಅಧ್ಯಕ್ಷ ಎಚ್. ಶಂಕರನಾರಾಯಣ ಭಟ್ ಹೊಸಮನೆ ಅಭಿಪ್ರಾಯಪಟ್ಟರು. ಅವರು ನಿನ್ನೆ ಆನಾಡಿಪಳ್ಳ ಶ್ರೀ ಈರ್ವರು ಉಳ್ಳಾಕ್ಲು ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಗೊಳಿಸಿ ಮಾತನಾಡುತ್ತಿದ್ದರು.
ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದರ್ಶಿ ವೈ. ಶ್ತಾಮ್ ಪ್ರಸಾದ್ ಎಯ್ಯೂರುಮೂಲೆ ಮಾತನಾಡಿದರು. ಗಣ್ಯರಾದ ಹರಿಣಿ ಜಿ ನಾಯ್ಕ್, ಚಿಕ್ಕಪ್ಪು ರೈ ಕನ್ನಿಮೂಲೆ, ಅಪ್ಪಣ್ಣ ಸೀತಾಂ ಗೋಳಿ, ಮಹಾಲಿಂಗೇಶ್ವರ ಭಟ್, ವೆಂಕಟಕೃಷ್ಣ ಭಟ್,ಗೋಪಾಲಕೃಷ್ಣ ಭಟ್ ಕೋಡಿಮೂಲೆ,ಉದಯ ಮುಕಾರಿಕಂಡ, ನಾರಾಯಣ ಮುಕಾರಿ ಕಂಡ, ರಜೀಶ್ ಮುಕಾರಿ ಕಂಡ, ರಮೇಶ್ ಮುಕಾರಿಕಂಡ, ಗೋಪಾಲ ಅನೋಡಿಪಳ್ಳ, ಕಿಶೋರ್ ಪಾಟಾಳಿ ಮುಕಾರಿಕಂಡ, ಶಂಕರ ಮೂಲ್ಯ, ಗೋಪಾಲ ಅನೋಡಿಪಳ್ಳ, ಗಣೇಶ್ ಗಟ್ಟಿ, ಹರೀಶ್, ಬಲರಾಜ್ ಮುಕಾರಿ ಕಂಡ, ನಿರ್ಮಲ ಕೇಚನಡಿ, ಕವಿತಾ, ಸರೋಜಿನಿ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.