ಅಪರಾಧ ಕೃತ್ಯಗಳನ್ನು ಪತ್ತೆಹಚ್ಚಲು ಸ್ಥಾಪಿಸಿದ ಕ್ಯಾಮರಾವನ್ನೇ ಕದ್ದ ಕಳ್ಳರು

ಕಾಸರಗೋಡು: ಅಪರಾಧ ಕೃತ್ಯಗಳನ್ನು ತಡೆಯಲು ಸ್ಥಾಪಿಸಿದ ಸಿಸಿ ಕ್ಯಾಮರಾವನ್ನೇ ಕಳ್ಳರು ಕದ್ದು ಸಾಗಿಸಿದ ಘಟನೆ ನಡೆದಿದೆ. ಚೆಮ್ನಾಡ್ ಗ್ರಾಮ ಪಂಚಾಯತ್‌ನ ಕೀಯೂರು ಮೀನುಗಾರಿಕಾ ಬಂದರಿಗೆ ಹೋಗುವ ರಸ್ತೆ ಬಳಿ ಸ್ಥಾಪಿಸಲಾಗಿದ್ದ ಸಿಸಿ ಟಿವಿ ಕ್ಯಾಮರಾವನ್ನು ಕಳವುಗೈದಿದ್ದಾರೆ. ಈ ಬಗ್ಗೆ ಪಂಚಾಯತ್ ಕಾರ್ಯದರ್ಶಿ ಎಂ.ಕೆ. ಅಲ್ಫ್ರೆಡ್ ಮೇಲ್ಪರಂಬ ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಕಳವುಗೈದ ಕ್ಯಾಮರಾ  10,000 ರೂ. ಮೌಲ್ಯದ್ದಾಗಿದೆ. ಇಂತಹ ತಲಾ  ಎರಡರಂತೆ  ಕ್ಯಾಮರಾಗಳನ್ನು ಪಂಚಾಯತ್ 10 ಸ್ಥಳಗಳಲ್ಲಿ ಸ್ಥಾಪಿಸಿದೆ. 

RELATED NEWS

You cannot copy contents of this page