ಅಪಾಯರೀತಿಯಲ್ಲಿ ಕಾರು ಚಲಾಯಿಸಿದ ಯುವಕನ ಸೆರೆ ಹಿಡಿದು ಪೊಲೀಸರಿಗೊಪ್ಪಿಸಿದ ನಾಗರಿಕರು

ಮುಳಿಯಾರು: ಅಪಾಯಕರವಾದ ರೀತಿಯಲ್ಲಿ ಅಪರಿಮಿತ ವೇಗದಲ್ಲಿ ಕಾರು ಚಲಾಯಿಸಿದ ಯುವಕನನ್ನು ನಾಗರಿಕರು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ನಿನ್ನೆ ರಾತ್ರಿ ಮುಳಿಯಾರು ಬಳಿಯ ಮಾಸ್ತಿ ಗುಡ್ಡೆಯಲ್ಲಿ ಘಟನೆ ನಡೆದಿದೆ. ಅಪಾಯಕರವಾದ ರೀತಿಯಲ್ಲಿ ಕಾರು ಚಲಾಯಿಸಿದ ಯುವಕನ ಕಾರನ್ನು ತಡೆದು ನಿಲ್ಲಿಸಿ ಸ್ಥಳೀಯರು, ಬಳಿಕ ಆದೂರು ಎಸ್.ಐಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತಲುಪಿದ ಎಸ್.ಐ. ತಂಬಾನ್ ಹಾಗೂ ಪೊಲೀಸರು ಯುವಕನನ್ನು ಕಸ್ಟಡಿಗೆ ತೆಗೆದಿದ್ದಾರೆ. ಕಾರನ್ನು ಕಸ್ಟಡಿಗೆ ತೆಗೆದಿದ್ದು, ಯುವಕ ಮದ್ಯಪಾನಗೈದಿರಬೇಕೆಂದು ಶಂಕಿಸಲಾಗಿದೆ.

You cannot copy contents of this page