ಕಾಸರಗೋಡು: ಕಾಸರಗೋಡು ಎಕ್ಸೈಸ್ ರೇಂಜ್ ಕಚೇರಿಯಲ್ಲಿ ನ. 25ರಂದು ದಾಖಲಿಸಲಾದ 175/2024 ನಂಬ್ರದ ಅಬಕಾರಿ ಪ್ರಕರ ಣದ ಆರೋಪಿ ಕೂಡ್ಲು ಬೆದ್ರಡ್ಕದ ರಾಜನ್ ಕೆ (39) ಎಂಬಾತನನ್ನು ಕಾಸರಗೋಡು ರೇಂಜ್ ಎಕ್ಸೈಸ್ ಇನ್ಸ್ಪೆಕ್ಟರ್ ಜೋಸೆಫ್ ಜೆ ನೇತೃತ್ವದ ತಂಡ ಬಂಧಿಸಿದೆ. ಈತನನ್ನು ಬಂಧಿಸಿದ ಅಬಕಾರಿ ತಂಡದಲ್ಲಿ ಸಿವಿಲ್ ಎಕ್ಸೈಸ್ ಆಫೀಸರ್ಗಳಾದ ಸಜಿತ್ ಕುಮಾರ್ ಕೆಎಸ್, ಅಜೆಯ್ ಸಿ.ಟಿ ಮತ್ತು ಅನು ರಾಗ್ ಎಂಬವರು ಒಳಗೊಂಡಿದ್ದರು.
