ಅಮೈ ಶ್ರೀ ಕೃಷ್ಣ ಭಜನಾಮಂದಿರ ನೂತನ ಪದಾಧಿಕಾರಿಗಳು

ಕಾಸರಗೋಡು: ಅಮೈ ಶ್ರೀಕೃಷ್ಣ ಭಜನಾ ಮಂದಿರ ಸಮಿತಿಯ ವಾರ್ಷಿಕ ಮಹಾಸಭೆ ಇತ್ತೀಚೆಗೆ ಜರಗಿತು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಗಂಗಾಧರ, ಅಧ್ಯಕ್ಷರಾಗಿ ಗುಣಪಾಲ ಅಮೈ, ಉಪಾಧ್ಯಕ್ಷರಾಗಿ ಪುಷ್ಪ, ಪ್ರಧಾನ ಕಾರ್ಯದರ್ಶಿಯಾಗಿ ರಾಮಚಂದ್ರ, ಜೊತೆ ಕಾರ್ಯದರ್ಶಿಯಾಗಿ ರಾಜೇಶ್, ಕೋಶಾಧಿಕಾರಿಯಾಗಿ ಮನೋಹರ ಆಯ್ಕೆಯಾದರು. ಇದೇ ವೇಳೆ ಶ್ರೀಕೃಷ್ಣ ಗೆಳೆಯರ ಬಳಗ ಸಮಿತಿಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಲತೇಶ್(ಅಧ್ಯಕ್ಷ), ಸುರೇಶ (ಉಪಾಧ್ಯಕ್ಷ), ಮುರಳೀಧರ (ಪ್ರಧಾನ ಕಾರ್ಯದರ್ಶಿ), ಶೋಭಿತ್, ನವನೀತ್, ಅಭಿಲಾಷ್ (ಜೊತೆ ಕಾರ್ಯದರ್ಶಿಗಳು), ಯೋಗೇಶ್ (ಕೋಶಾಧಿಕಾರಿ) ಆಯ್ಕೆಯಾದರು. ರಾಮಚಂದ್ರ ಸ್ವಾಗತಿಸಿ, ರಾಜೇಶ್ ವಂದಿಸಿದರು.

You cannot copy contents of this page