ಆಂಬುಲೆನ್ಸ್-ಲಾರಿ ಢಿಕ್ಕಿ

ಕಾಸರಗೋಡು: ರೋಗಿಯನ್ನು ಕೊಂಡು ಹೋಗುತ್ತಿದ್ದ ಆಂಬುಲೆನ್ಸ್ ಲಾರಿಗೆ ಮುಖಾಮುಖಿಯಾಗಿ ರೋಗಿ ಹಾಗೂ ನರ್ಸ್ ಗಾಯಗೊಂಡ ಘಟನೆ ನಡೆದಿದೆ. ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದ ಯುವಕನನ್ನು ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯಿಂದ ಕಣ್ಣೂರು ಪರಿಯಾರಂ ಮೆಡಿಕಲ್ ಕಾಲೇಜಿಗೆ ಕೊಂಡು ಹೋಗುತ್ತಿದ್ದಾಗ ನಿನ್ನೆ ಸಂಜೆ ಪಡನ್ನಕ್ಕಾಡ್ ಮೇಲ್ಸೇತುವೆ ಬಳಿ ಅಪಘಾತಕ್ಕೀಡಾಗಿದೆ. ಬಲ್ಲ ನಿವಾಸಿಗೆ ಗಾಯಗೊಂಡಿದೆ. ಆಂಬುಲೆನ್ಸ್‌ನಲ್ಲಿದ್ದ ನರ್ಸ್‌ನ ಹಲ್ಲಿಗೂ ಗಾಯ ಉಂಟಾಗಿದೆ.

You cannot copy contents of this page