ಆಟೋರಿಕ್ಷಾ ಮಜ್ದೂರ್ ಸಂಘ ಚೌಕಿ ಯೂನಿಟ್ ಸಮ್ಮೇಳನ

ಕಾಸರಗೋಡು: ಆಟೋರಿಕ್ಷಾ ಮಜ್ದೂರ್ ಸಂಘ (ಬಿಎಂಎಸ್) ಚೌಕಿ ಯೂನಿಟ್ ಸಮ್ಮೇಳನ ಸಿಪಿಸಿಆರ್‌ಐ ಕಾವುಗೋಳಿ ಶ್ರೀ ಶಿವ ದೇವಸ್ಥಾನದಲ್ಲಿ ನಡೆಯಿತು. ಯೂನಿಟ್ ಅಧ್ಯಕ್ಷ ದಯಾನಂದ ಅಧ್ಯಕ್ಷತೆ ವಹಿಸಿದರು. ಆಟೋರಿಕ್ಷಾ ಮಜ್ದೂರ್ ಸಂಘದ ಜಿಲ್ಲಾ ಕೋಶಾಧಿಕಾರಿ ಕುಂಞಿಕೃಷ್ಣನ್ ಉದ್ಘಾಟಿಸಿ ಮಾತನಾಡಿದರು. ಯೂನಿಟ್ ಕಾರ್ಯದರ್ಶಿ ಯಧುಕುಲೇಶ್ ವರದಿ ಮಂಡಿಸಿದರು. ಬಿಎಂಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ಗುರುದಾಸ್ ಮಧೂರು ಸಮಾರೋಪ ಭಾಷಣ ನಡೆಸಿದರು. ಉದಯ ಮಲ್ಲಿ ಸ್ವಾಗತಿಸಿ, ಯೂನಿಟ್‌ನ ನೂತನ ಕಾರ್ಯದರ್ಶಿ ರಂಜಿತ್ ವಂದಿಸಿದರು. ನೂತನ ಸಮಿತಿಯ ಅಧ್ಯಕ್ಷರಾಗಿ ದಯಾನಂದ, ಉಪಾಧ್ಯಕ್ಷರಾಗಿ ಸತೀಶ್, ಸಂದೇಶ್, ಕಾರ್ಯದರ್ಶಿಯಾಗಿ ರಂಜಿತ್, ಜೊತೆ ಕಾರ್ಯದರ್ಶಿ ಗಳಾಗಿ ಚಂದ್ರಹಾಸ, ಮನುಪ್ರಸಾದ್, ಕೋಶಾಧಿಕಾರಿಯಾಗಿ ಉದಯ ಬಿ.ಆರ್. ಕಂಬಾರ್ ಎಂಬಿವರನ್ನು ಆರಿಸಲಾಯಿತು.

You cannot copy contents of this page