ಆನ್ಯರಾಜ್ಯ ಕಾರ್ಮಿಕನ ಬೆದರಿಸಿ ದಿಗ್ಬಂಧನ: ಯುವಕ ಸೆರೆ

ಕಲ್ಲಿಕೋಟೆ: ತಾಮರಶ್ಶೇರಿ ಪಿ.ಸಿ ಮುಕ್ಕ್‌ನಲ್ಲಿ ಅನ್ಯರಾಜ್ಯ ಕಾರ್ಮಿಕನನ್ನು ಕೋವಿ ತೋರಿಸಿ ದಿಗ್ಬಂಧನಗೊಳಿಸಿದ ಯುವಕನನ್ನು ಸೆರೆಹಿಡಿಯಲಾಗಿದೆ. ಬಂಗಾಳ ನಿವಾಸಿ ನಾಜ್ಮಿ ಅಲಿ (19)ನನ್ನು ಮನೆ ಶುಚೀಕರಿಸುವ ಕೆಲಸಕ್ಕೆಂದು ತಿಳಿಸಿ ನಿನ್ನೆ ಬೆಳಿಗ್ಗೆ ೭.೩೦ರ ವೇಳೆ ನಿಲಂಬೂರ್ ನಿವಾಸಿ ಬಿನು ಕಾರ್ಮಿಕನನ್ನು ಕರೆದುಕೊಂಡು ಹೋಗಿದ್ದನು.  ಆ ಬಳಿಕ ಕೋವಿ ತೋರಿಸಿ   ಬೆದರಿಸಿ  ದಿಗ್ಬಂಧನಗೊ ಳಿಸಿ ನೆಂದು ಕಾರ್ಮಿಕ ತಿಳಿಸುತ್ತಾರೆ.

ಮನೆ ಶುಚೀಕರಿಸಲೆಂದು ತಿಳಿಸಿ ಕರೆದುಕೊಂಡು ಹೋಗಿ ಬಾಡಿಗೆ  ಕ್ವಾರ್ಟರ್ಸ್‌ನಲ್ಲಿ ಕೋವಿ ತೋರಿಸಿ ಬೆದರಿಸಿ ಬೈಕ್‌ನಲ್ಲಿ ತನ್ನೊಂದಿಗೆ ಬರಹೇಳಿದ್ದನು. ನಂತರ ತಾಮರಶ್ಶೇರಿ-ಮುಕ್ಕಂ ರಸ್ತೆಯಲ್ಲಿ ಒಂದು ಗಂಟೆಗಳ ಕಾಲ ಸಂಚಾರ ನಡೆಸಿದ್ದಾನೆ. ಬಳಿಕ ವಿವಿಧ ಕಡೆಗಳಿಗೆ ಸಾಗಿದ ಬಳಿಕ ತನ್ನನ್ನು ಕೈಕಾಲು ಕಟ್ಟಿ ರಸ್ತೆಗೆ ಹಾಕಿದ್ದಾನೆ. ಜೊತೆಗೆ ತನ್ನನ್ನೂ ಬಂಧಿಸಿದ ಬಗ್ಗೆ  ಗೆಳೆಯರಲ್ಲಿ ತಿಳಿಸಲು ಹೇಳಿದ್ದಾನೆ. ಅವರಿಗೆ ಲೊಕೇಶನ್ ಕೂಡಾ ಕಳುಹಿಸಿದ್ದಾನೆ. ಗೆಳೆಯರು ಪೊಲೀಸರ ಜೊತೆ ಸ್ಥಳಕ್ಕೆ ತಲುಪಿ ಬಿನುವನ್ನು ಸೆರೆಹಿಡಿದಿರುವುದಾಗಿ ನಾಜ್ಮಿ ಪೊಲೀಸರಿಗೆ ತಿಳಿಸಿದ್ದಾನೆ.

You cannot copy contents of this page