ಆಪರೇಷನ್ ಅಜಯ್ ಎರಡನೇ ಬ್ಯಾಚ್‌ನಲ್ಲಿ ೨೩೫ ಮಂದಿ ಭಾರತೀಯರು ತಾಯ್ನಾಡಿಗೆ

ನವದೆಹಲಿ: ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಯುದ್ಧದಿಂದಾಗಿ ಇಸ್ರೇಲ್ ನಲ್ಲಿ ಸಿಲುಕಿಕೊಂಡಿರುವ ಭಾರತೀಯರ ಎgಡನೇ ಬ್ಯಾಚ್‌ನಲ್ಲೂ ೨೩೫ ಮಂದಿ  ಇಂದು ಬೆಳಿಗ್ಗೆ ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅತ್ಯಂತ ಸುರಕ್ಷಿತವಾಗಿ ಬಂದಿಳಿದಿದೆ.

ಆಪರೇಶನ್ ಅಜಯ್ ಕಾರ್ಯಾ ಚರಣೆಯಂತೆ ಮೊದಲ ಬ್ಯಾಚ್‌ನಲ್ಲಿ ನಿನ್ನೆ ಒಟ್ಟು ೨೧೨ ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿತ್ತು. ಎರಡನೇ ಬ್ಯಾಚ್‌ನಲ್ಲಿ ಇಂದು ಬೆಳಿಗ್ಗೆ ತಾಯ್ನಾಡಿಗೆ ಆಗಮಿಸಿದ ೨೩೫ ಮಂದಿ ಭಾರತೀ ಯರನ್ನು ದಿಲ್ಲಿ ವಿಮಾನ ನಿಲ್ದಾಣದಲ್ಲಿ ಕೇಂದ್ರ ರಾಜ್ಯ ಖಾತೆ ಸಚಿವ ರಾಜ್‌ಕುಮಾರ್ ರಂಜನ್ ಸಿಂಗ್ ಸ್ವಾಗತಿಸಿದರು. ಇಸ್ರೇಲ್‌ನಲ್ಲಿ ೧೮,೦೦೦ ಭಾರತೀಯರಿದ್ದಾರೆ ಎಂಬುವುದು ಅಧಿಕೃತ ಲೆಕ್ಕಾಚಾರವಾಗಿದೆ.

You cannot copy contents of this page