ಆರಿಕ್ಕಾಡಿ ದೈವಸ್ಥಾನದ ಜೀರ್ಣೋದ್ಧಾರ ವಿಜ್ಞಾಪನಾ ಪತ್ರ ಬಿಡುಗಡೆ

ಕುಂಬಳೆ: ಆರಿಕ್ಕಾಡಿ ಶ್ರೀ ಪಿಲಿಚಾ ಮುಂಡಿ, ಅಣ್ಣಪ್ಪ ಪಂಜುರ್ಲಿ, ಕೋಮ ರಾಯ ದೈವಸ್ಥಾನದ ವಿಜ್ಞಾಪನಾ ಪತ್ರ ವನ್ನು ಸಮಿತಿಯ ಸಂರಕ್ಷಕ ಬ್ರಹ್ಮಶ್ರೀ ಚಕ್ರಪಾಣಿ ದೇವಪೂಜಿತ್ತಾಯರ ಉಪಸ್ಥಿತಿಯಲ್ಲಿ ಬಿಡುಗಡೆಗೊಳಿಸಲಾ ಯಿತು. ಸಮಿತಿಯ ಅಧ್ಯಕ್ಷ ಮಂಜು ನಾಥ ಆಳ್ವ ಮಡ್ವ, ದೂಮಣ್ಣ ಶೆಟ್ಟಿ ಕೊಡ್ಯಮ್ಮೆಗುತ್ತು, ನಾಗೇಶ್ ಕಾರ್ಳೆ, ರಾಮಚಂದ್ರ ಶೆಟ್ಟಿ ಬೀರಂಟಿಕೆರೆ ಹಾಗೂ ಸಮಿತಿಯ ಕಾರ್ಯದರ್ಶಿಗಳಾದ ಕೃಷ್ಣಪ್ಪ ಪೂಜಾರಿ ಶೇಣಿ, ಲಕ್ಷ್ಮಣ ಆಳ್ವ ಕುಂಡಾಪುಗುತ್ತು, ರಮೇಶ್ ರೈ ಕುಂಡಾ ಪುಗುತ್ತು, ಲೋಕನಾಥ ಶೆಟ್ಟಿ ಉಜಾರು ಸುಬ್ಬಣ್ಣ ಬಂಬ್ರಾಣಬೈಲು, ಸಂಜೀವ ಪೂಜಾರಿ ಜೋಡುಗೋಳಿ, ಗಂಗಾಧರ ಕುಂಡಾಪು ಹಾಗೂ ಸದಸ್ಯರಾದ ನಾಗೇಶ್ ಚಂದ್ರಶೇಖರ ಪಿ.ಕೆ, ಪೂವಪ್ಪ ಪೂಜಾರಿ ಮಂಡಿತ್ತಡ್ಕ, ಗೋಪಾಲಕೃಷ್ಣ, ಕಮಲ, ಸುಂದರಿ, ಅಜಯನ್ ಪಾಲೋಲಿ ಪಯ್ಯ ನ್ನೂರು, ರಮೇಶ್ ಎಂ, ಬಡುವನ್ ಕುಂಞಿ ಕುಂಡಾಪು, ಮೊಕ್ತೇಸರರಾದ ಐತ್ತಪ್ಪ ಆರಿಕ್ಕಾಡಿ ಹಾಗೂ ಕೋಶಾಧಿಕಾರಿ ಅಜಯ ಕುಮಾರ್ ಉಪಸ್ಥಿತರಿದ್ದರು.

RELATED NEWS

You cannot copy contents of this page