ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಸ್ಥಾನ ಪಡೆದ ಅಣಂಗೂರಿನ 2ರ ಬಾಲಕಿ
ಕಾಸರಗೋಡು: ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಸ್ಥಾನ ಪಡೆದು ಅಣಂಗೂರು ನಿವಾಸಿ 2 ವರ್ಷದ ಬಾಲಕಿ ಹೆಮ್ಮೆ ತಂದಿದ್ದಾಳೆ. ಕಾಸರ ಗೋಡು ಕೊಹಿನೂರು ಟ್ರಾವಲ್ಸ್ನ ಯೂಸಫ್ಅಸ್ಫಾಕ್ ಹಾಗೂ ನೆಲ್ಲಿಕುಂಜೆ ನೌರಿನ್ ಶಮ್ನಾಸ್ ದಂಪತಿ ಪುತ್ರಿಯಾದ ಮರ್ಯಂ ಅಮಾನಿ ಅಸ್ಫಾಕ್ ಈ ಸಾಧನೆ ಮಾಡಿದ್ದಾಳೆ. 3 ಇಂಗ್ಲೀಷ್ ಪದ್ಯಗಳು ಹಾಗೂ ಇಂಗ್ಲೀಷ್ ಅಕ್ಷರ ಮಾಲೆ, ಶರೀರದ 14 ಭಾಗಗಳು, ಜಲಜಂತುಗಳು, ಸಾಕುಮೃಗಗಳು, ಕಾಡು ಪ್ರಾಣಿಗಳು, ಆಹಾರ ವಸ್ತುಗಳು, ಬಣ್ಣಗಳು, ಪ್ರಾಣಿಗಳು, ಕಾರ್ಟೂನ್ ಕಥಾ ಪಾತ್ರಗಳು ಸಹಿತ 160 ಚಿತ್ರಗಳನ್ನು ನಾಲ್ಕು ನಿಮಿಷದಲ್ಲಿ ಗುರುತು ಹಿಡಿದು ಈಕೆ ದಾಖಲೆ ಮಾಡಿದ್ದಾಳೆ.