ಇನ್ನು ನಾವು ಹೇಳುತ್ತೇವೆ, ನೀವು ಕೇಳಿ’  ಪ್ಲಸ್‌ವನ್ ವಿದ್ಯಾರ್ಥಿಗಳಿಗೆ ಸೀನಿಯರ್‌ಗಳಿಂದ ಮಿಠಾಯಿ ಬೆದರಿಕೆ

ಕಾಸರಗೋಡು: ಇನ್ನು ನಾವು ಹೇಳುತ್ತೇವೆ ಅದನ್ನು ನೀವುಕೇಳಿ ಅನುಸರಿಸಬೇಕು  ಇದು ಪ್ಲಸ್‌ವನ್ ವಿದ್ಯಾರ್ಥಿಗಳಿಗೆ ಸೀನಿಯರ್ ವಿದ್ಯಾರ್ಥಿಗಳು ನೀಡಿರುವ ಬೆದರಿಕೆ. ಅಂದರೆ ಈ ಬೆದರಿಕೆಯನ್ನು ನೇರವಾಗಿ  ಬಾಯಿಮಾತಿನಿಂದ ನೀಡಲಾಗಿಲ್ಲ. ಅದನ್ನು ಪ್ಲಸ್‌ವನ್ ವಿದ್ಯಾರ್ಥಿಗಳಿಗೆ ವಿತರಿಸಲು ತರಲಾದ ಚಾಕ್ಲೆಟ್ ಕವರ್‌ನಲ್ಲಿ ಮುದ್ರಿಸಲಾಗಿದೆ.

ಇದು ನಡೆದಿರುವುದು ಕಾಸರಗೋಡು ತಳಂಗರೆ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ. ಈ ಶಾಲೆಗೆ ಕಾರೊಂದರಲ್ಲಿ ಬರುತ್ತಿದ್ದ ಕೆಲವು ವಿದ್ಯಾರ್ಥಿಗಳು,  ಪೊಲೀಸರನ್ನು ಕಂಡು ಹೆದರಿ ಕಾರನ್ನು ಅಲ್ಲೇ ಬಿಟ್ಟು ಜಾಗ ಖಾಲಿಮಾಡಿದ್ದರು. ಶಂಕೆಗೊಂಡ ಪೊಲೀಸರು ಆ ಕಾರನ್ನು ತಪಾಸಣೆಗೊಳಪಡಿಸಿದಾಗ ಅದರಲ್ಲಿ ಮಿಠಾಯಿ ಪ್ಯಾಕೆಟ್‌ಗಳು ಪತ್ತೆಯಾಗಿದೆ. ಆ ಪ್ಯಾಕೆಟ್‌ಗಳನ್ನು ಪೊಲೀಸರು  ಪರಿಶೀಲಿಸಿದಾಗ ಇತ್ತೀಚೆಗಷ್ಟೇ ಬಿಡುಗಡೆಗೊಂಡು ಮೆಘಾಹಿಟ್ ಆದ ಸೂಪರ್ ಸ್ಟಾರ್ ಮೋಹನ್‌ಲಾಲ್ ನಟಿಸಿದ ತುಡರುಂ ಎಂಬ ಮಲೆಯಾಳಂ ಸಿನಿಮಾದ ಕೆಲವೊಂದು ಸಂಭಾಷಣೆ ಗಳನ್ನು ಬರೆದ ಸಿಕ್ಕರ್‌ಗಳನ್ನು  ಆ ಪ್ಯಾಕೆಟ್‌ಗಳ ಮೇಲೆ ಲಗತ್ತಿಸಲಾಗಿತ್ತು. ಇನ್ನು ನಾವು ಹೇಳುತ್ತೇವೆ ಅದನ್ನು ನೀವು ಅನುಸರಿಸಬೇಕು. ಶೂ ಧರಿಸಬಾರದು. ವಾಹನ ಸಲ್ಲದು, ಪ್ರೇಮಿಸಬಾರದು, ಮೊಬೈಲ್ ಫೋನ್ ಬಳಸಬಾರದು, ಧೂಮಪಾನ ಮಾಡಬಾರದು ಎಂಬೀ ನಿರ್ದೇಶಗಳನ್ನು ಆ ಸ್ಟಿಕ್ಕರ್‌ನಲ್ಲಿ ನೀಡಲಾಗಿದೆ. ಪೊಲೀಸರು ಬಳಿಕ ಮಿಠಾಯಿಗಳನ್ನು  ತಂದ ಕಾರಿನ ಸಹಿತ ವಶಕ್ಕೆ ತೆಗೆದು ಪೊಲೀಸ್ ಠಾಣೆಗೊಯ್ದರು. ಚಾಕ್ಲೆಟ್‌ಗಳನ್ನು ಪ್ರಸ್ತುತ ಶಾಲೆಯ ಪ್ಲಸ್ ವನ್ ವಿದ್ಯಾರ್ಥಿಗಳಿಗೆ ವಿತರಿಸಲು  ಕೆಲವು ಸೀನಿಯರ್ ವಿದ್ಯಾರ್ಥಿಗಳು ತಂದಿದ್ದರೆಂದು,  ಜ್ಯೂನಿಯರ್ ವಿದ್ಯಾರ್ಥಿಗಳನ್ನು ತಮ್ಮ ಹಿಡಿತದಲ್ಲಿ ನಿಲ್ಲಿಸುವ ಉದ್ದೇಶದಿಂದ  ಆ ಚಾಕ್ಲೆಟ್‌ಗಳನ್ನು ತಂದಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

ಆ ಕಾರಿನ ಮಾಲಕರನ್ನು ನಂತರ ಪೊಲೀಸರು ಠಾಣೆಗೆ ಕರೆಸಿ ಅವರನ್ನು ವಿಚಾರಿಸಿದಾಗ ಆ ಕಾರನ್ನು ಚಲಾಯಿಸಿದ ಯುವಕನ ಗುರುತು ಹಚ್ಚಿದ್ದಾರೆ. ಕಾರುಚಲಾ ಯಿಸಿದ ಯುವಕ 18 ವರ್ಷ ಪೂರ್ತಿಗೊಂಡವ ಹಾಗೂ ಲೈಸನ್ಸ್ ಹೊಂದಿರುವ ವ್ಯಕ್ತಿಯಾ ಗಿರುವುದರಿಂದ ಆತನ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಳ್ಳದೆ  ಆತನಿಗೆ ತಾಕೀತು ನೀಡಿ ಬಳಿಕ ಬಿಡುಗಡೆಗೊಳಿ ಸಿದರು.

RELATED NEWS

You cannot copy contents of this page