ಇನ್‌ಸ್ಟಾಗ್ರಾಂನಲ್ಲಿ ಪರಿಚಯಗೊಂಡ ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿ ಸೆರೆ

ಕಾಸರಗೋಡು: ಇನ್‌ಸ್ಟಾಗ್ರಾಂ ನಲ್ಲಿ ಪರಿಚಯಗೊಂಡ ಪ್ರಾಯಪೂ ರ್ತಿಯಾಗದ ಬಾಲಕಿಯನ್ನು ಕಾರಿನಲ್ಲಿ ಹೇರಿಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿ  ಮೊಬೈಲ್‌ನಲ್ಲಿ ಅದರ ದೃಶಗಳನ್ನು ಚಿತ್ರೀಕರಿಸಿ ಅದನ್ನು ಪ್ರಚಾರ ಮಾಡಲಾಗುವುದೆಂದು ಬೆದರಿಸಿದ   ಬಳಿಕ ವಿದೇಶಕ್ಕೆ ಸಾಗಿಸಿ ದ ಪೋಕ್ಸೋ ಪ್ರಕರಣದ ಆರೋಪಿ ಯನ್ನು ಚಂದೇರ ಪೊಲೀಸರು ಬಂಧಿಸಿದ್ದಾರೆ.

ಕಲ್ಲಿಕೋಟೆ ನಾದಾಪುರಂ ನಿವಾಸಿ ಎನ್. ಯಾಹಿಯಾ (೨೮) ಬಂಧಿತನಾದ ಆರೋಪಿ. ಚಂದೇರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್  ಜಿ.ಪಿ. ಮನುರಾಜ್ ಈತನನ್ನು ಬಂಧಿಸಿದ್ದಾರೆ.

ನೀಲೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪ್ರದೇಶದ ಬಾಲಕಿಯನ್ನು ಕಳೆದ ವರ್ಷ ಇನ್‌ಸ್ಟಾಗ್ರಾಂ ಮೂಲಕ ಪರಿಚ ಯಗೊಂಡು ಬಳಿಕ ಕಾರಿನಲ್ಲಿ  ಬಂದು ಆಕೆಯನ್ನು ಕರೆದೊಯ್ದು ಲೈಂಗಿಕ ಕಿರುಕುಳ ನೀಡಿ ಅದರ ದೃಶಗಳನ್ನು ಚಿತ್ರೀಕರಿಸಿ ಬಳಿಕ ಬೆದರಿಕೆಯೊಡ್ಡಿದ ಆರೋಪದಂತೆ ಆ ಬಾಲಕಿ ಪೊಲೀಸರಿಗೆ ದೂರು ನೀಡಿದ್ದಳು.

ಅದರಂತೆ ಚಂದೇರ ಪೊಲೀಸರು ಪೋಕ್ಸೋ ಕಾನೂನು ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದರು. ಆ ವೇಳೆ ಆರೋಪಿ ಯಾಹಿಯಾ ವಿದೇಶಕ್ಕೆ ಪರಾರಿಯಾಗಿದ್ದನು. ಅದರಂತೆ ಆತನ ಪತ್ತೆಗಾಗಿ ಪೊಲೀಸರು ಬಳಿಕ ಲುಕೌಟ್ ನೋಟೀಸನ್ನು ಜ್ಯಾರಿಗೊಳಿಸಿದ್ದರು.  ಈಮಧ್ಯೆ ಆರೋಪಿ ಊರಿಗೆ ಹಿಂತಿರುಗಲೆಂದು ಮೊನ್ನೆ   ನೆಡುಂಬಾಶ್ಶೇರಿ ನಿಲ್ದಾಣದಲ್ಲಿ ಬಂದಿಳಿದಿದ್ದನು. ಅಲ್ಲಿಂದ ಆತನನ್ನು ವಿಮಾನ ನಿಲ್ದಾಣದ ಎಮಿಗ್ರೇಷನ್ ವಿಭಾಗದವರು ವಶಕ್ಕೆ ತೆಗೆದಬಳಿಕ   ಚಂದೇರಾ ಪೊಲೀಸರಿಗೆ ಹಸ್ತಾಂತರಿ ಸಿದ್ದಾರೆ. ಬಂಧಿತ ಆರೋಪಿಯನ್ನು ಬಳಿಕ ನ್ಯಾಯಾಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನ ದಲ್ಲಿರಿಸಲಾಗಿದೆ.

You cannot copy contents of this page