ಇಮ್ಮಡಿ ಬಡ್ಡಿ ಭರವಸೆ : ಯುವತಿಯಿಂದ 31 ಲಕ್ಷ ರೂ. ಪಡೆದು ವಂಚನೆ; ದಂಪತಿ ವಿರುದ್ಧ ಕೇಸು

ಹೊಸದುರ್ಗ: ಹೆಚ್ಚು ಬಡ್ಡಿ ಸಹಿತ ವಿವಿಧ ಭರವಸೆಯೊಡ್ಡಿ ಜನರಿಂದ ಹಣ ಪಡೆದು ವಂಚಿಸುವ ತಂಡಗಳು ವ್ಯಾಪಕಗೊಂಡಿದೆ. ಈ ಕುರಿತಾಗಿ ಸರಕಾರ, ವಿವಿಧ ಇಲಾಖೆಗಳು ಮುನ್ನೆಚ್ಚರಿಕೆ ನೀಡುತ್ತಿದ್ದರೂ ಜನರು ವಂಚನೆಯಲ್ಲಿ ಸಿಲುಕುತ್ತಿರುವ ಪ್ರಕರಣಗಳು ಮತ್ತೆ ಮತ್ತೆ ಕೇಳಿ ಬರುತ್ತಿದೆ.

ಮೊತ್ತದ ಇಮ್ಮದಿ ಬಡ್ಡಿ ನೀಡುವುದಾಗಿ ತಿಳಿಸಿ ಓರ್ವ ಯುವತಿಯಿಂದ 31ಲಕ್ಷ ರೂಪಾಯಿ ಪಡೆದು ವಂಚಿಸಿದ ಬಗ್ಗೆ ಇದೀಗ ಆರೋಪ ಕೇಳಿ ಬಂದಿದೆ. ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ ಉದಿನೂರು ನಿವಾಸಿಯಾದ ಯುವತಿ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಕಲ್ಲಿಕೋಟೆ ವಡಗರ ಹಾಗೂ ಪಂದಿರಂಕಾವು ನಿವಾಸಿಗಳಾದ ದಂಪತಿ ವಿರುದ್ಧ ಆರೋಪವುಂಟಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ದೂರುದಾತೆಯಾದ ಯುವತಿಯನ್ನು ಇವರು ಇನ್‌ಸ್ಟಾಗ್ರಾಂ ಮೂಲಕ ಪರಿಚಯಗೊಂಡಿದ್ದರು. ಅನಂತರ ಯುಎಇಯಲ್ಲಿರುವ ವ್ಯಾಪಾರದಲ್ಲಿ ಹಣ ಠೇವಣಿಯಿರಿಸಿದರೆ ಇಮ್ಮಡಿ ಲಾಭ ಲಭಿಸಬಹುದೆಂಬ ಭರವಸೆಯೊಡ್ಡಿ ಯುವತಿಯಿಂದ ೩೧ ಲಕ್ಷ ರೂಪಾಯಿ ಪಡೆದುಕೊಂಡಿರುವುದಾಗಿ ತಿಳಿಸಲಾಗಿದೆ. ಆದರೆ ತಿಂಗಳುಗಳು ಕಳೆದರೂ ಠೇವಣಿಯಿರಿಸಿದ ಹಣ ಕೂಡಾ ಲಭಿಸದ ಹಿನ್ನೆಲೆಯಲ್ಲಿ ಯುವತಿ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾಳೆ

You cannot copy contents of this page