ಉತ್ಸವ ಸ್ಥಳದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತನಿಗೆ ಇರಿತ

ತಿರುವನಂತಪುರ: ತಿರುವನಂ ಪುರ ಕಾಟಾಕಡದ  ಉತ್ಸವ ಸ್ಥಳದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತನಿಗೆ ತಂಡವೊಂದು ಇರಿದು ಗಾಯ ಗೊಳಿಸಿದೆ. ಆರ್ ಎಸ್‌ಎಸ್ ಮಂಡಲ ಕಾರ್ಯದರ್ಶಿ  ತಲಕೋ ಣಂ ನಿವಾಸಿ ಯಾದ ವಿಷ್ಣು ಎಂಬ ವರು ಇರಿತದಿಂದ ಗಾಯಗೊಂಡಿ ದ್ದಾರೆ.  ಕಾಞಿರವಿಳ ಶಕ್ತಿ ವಿನಾ ಯಕ ಕ್ಷೇತ್ರದಲ್ಲಿ ಉತ್ಸವ ಕಾರ್ಯ ಕ್ರಮ ನಡೆಯುತ್ತಿದ್ದ ವೇಳೆ ನಿನ್ನೆ ಈ ಘಟನೆ ನಡೆದಿದೆ.  ವಿಷ್ಣು ಬೈಕ್‌ಗೆ ಹತ್ತುತ್ತಿದ್ದಂತೆ  ತಲುಪಿದ ೫ ಮಂದಿ ತಂಡ ಅವರನ್ನು ಕೆಳಗೆ ಎಳೆದು ಹಾಕಿ ಇರಿದು ಗಾಯಗೊಳಿಸಿದೆ. ತಲೆ ಸಹಿತ ದೇಹದಾದ್ಯಂತ ಗಂಭೀರ ಗಾಯಗೊಂಡಿರುವ ವಿಷ್ಣುವನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿ ಶಸ್ತ್ರಚಿಕಿತ್ಸೆಗೊಳಪಡಿಸ ಲಾಯಿತು. ವಿಷ್ಣುವಿಗೆ ಇರಿದ ಪ್ರಕರಣಕ್ಕೆ ಸಂಬಂಧಿಸಿ ಕಾಟಾಕಡ ಪೊಲೀಸರು ಮೂರು ಮಂದಿಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

RELATED NEWS

You cannot copy contents of this page