ಉದ್ಯಮಿಯ ಕೊಲೆ: ವಿದೇಶದಲ್ಲಿರುವ ಇಬ್ಬರು ಆರೋಪಿಗಳಿಗಾಗಿ ಲುಕೌಟ್ ನೋಟೀಸ್

ಉದುಮ: ಉದ್ಯಮಿ ಎಂ.ಸಿ. ಅಬ್ದುಲ್ ಗಫೂರ್ ಹಾಜಿಯವರ ಕೊಲೆಗೆ ಸಂಬಂಧಿಸಿ ವಿದೇಶದಲ್ಲಿರುವ ಇಬ್ಬರು ಆರೋಪಿಗಳನ್ನು ಊರಿಗೆ ತಲುಪಿಸಲು ಕ್ರಮ ಆರಂಭಿಸಲಾಗಿದೆ. ಪಳ್ಳಿಕ್ಕರೆ ಪೂಚಕ್ಕಾಡ್‌ನ ಉವೈಸ್, ಶಮ್ಮಾಸ್ ಎಂಬಿವರನ್ನು ಆರೋಪಪಟ್ಟಿ ಯಲ್ಲಿ ಸೇರಿಸಿಕೊಂಡು ತನಿಖಾ ತಂಡ ಈ ಮೊದಲು ಹೊಸದುರ್ಗ ನ್ಯಾಯಾ ಲಯದಲ್ಲಿ ವರದಿ ನೀಡಿತ್ತು. ಇದರ ಮುಂದುವರಿಕೆಯಾಗಿ ಇವರು ಕೊಲೆ ಕೃತ್ಯ ಪ್ರಕರಣದಲ್ಲಿ ಆರೋಪಿಗಳಾಗಿ ದ್ದಾರೆಂದು ತೋರಿಸಿ ಲುಕೌಟ್ ನೋಟೀಸ್ ತಿರುವನಂತಪುರ ಕ್ರೈಮ್ ಬ್ರಾಂಚ್ ಹೆಡ್ ಕ್ವಾರ್ಟರ್ಸ್ ಮೂಲಕ ಸಂಬಂಧಪಟ್ಟ ರಾಯಭಾರಿ ಕಚೇರಿಗಳಿಗೆ ಕಳುಹಿಸಿಕೊಡಲಾಗಿದೆ. ಇದರೊಂದಿಗೆ ವಿದೇಶದಲ್ಲಿರುವ ಆರೋಪಿಗಳನ್ನು ಊರಿಗೆ ವಾಪಸ್ ಕರೆತರುವುದಾಗಿ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಡಿಸಿಆರ್‌ಬಿ ಡಿವೈಎಸ್‌ಪಿ ಕೆ.ಜೆ. ಜೋನ್ಸನ್ ತಿಳಿಸಿದ್ದಾರೆ.

ಈ ಮಧ್ಯೆ ಹೇಳಿಕೆ ದಾಖಲಿಸಲು ಕಸ್ಟಡಿಗೆ ಲಭಿಸಿದ ೭ನೇ ಆರೋಪಿ ಪಳ್ಳಿಕೆರೆ ಪೂಚಕ್ಕಾಡ್‌ನ ಸೈಫುದ್ದೀನ್ ಬಾದುಷ (33)ನನ್ನು ಪೊಲೀಸರು ಕಸ್ಟಡಿ ಕಾಲಾವಧಿ ಮುಗಿದ ಹಿನ್ನೆಲೆಯಲ್ಲಿ ಹೊಸದುರ್ಗ ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ಜೈಲಿಗಟ್ಟಲಾಗಿದೆ. ಸೈಫುದ್ದೀನ್ ಅಡವಿಟ್ಟ 118 ಗ್ರಾಂ ಚಿನ್ನಾ ಭರಣ, ಘಟನೆ ನಡೆದ ಸಮಯದಲ್ಲಿ ಆರೋಪಿ ಉಪಯೋಗಿಸಿದ್ದ ಎರಡು ಬೈಕ್‌ಗಳು ಎಂಬಿವುಗಳನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ. ಆರೋಪಿಗಳು ತಮ್ಮೊಳಗೆ ವಿನಿಮಯ ಮಾಡಿಕೊಂಡ ಸಂದೇಶಗಳನ್ನು ಹಾಗೂ ಫೋನ್‌ಕಾಲ್‌ಗಳ ಡಿಜಿಟಲ್ ದಾಖಲೆಗಳನ್ನು ಕೂಡಾ ಪೊಲೀಸರು ಸಂಗ್ರ ಹಿಸಿದ್ದಾರೆ. ಪ್ರಕರಣದಲ್ಲಿ ಒಟ್ಟು ೭ ಆರೋಪಿ ಗಳಿದ್ದು, 1, 2, 3, 7೭ನೇ ಆರೋಪಿಗಳು ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ. 

Leave a Reply

Your email address will not be published. Required fields are marked *

You cannot copy content of this page